ADVERTISEMENT

ಮಾಲೂರು: ಕಣ್ಣು ದಾನ ಮಾಡಿದ ವಯೋವೃದ್ಧ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:29 IST
Last Updated 26 ಅಕ್ಟೋಬರ್ 2025, 7:29 IST
ಚಿಕ್ಕಮುನಿಯಪ್ಪ
ಚಿಕ್ಕಮುನಿಯಪ್ಪ   

ಮಾಲೂರು: ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದ ತಾಲ್ಲೂಕಿನ ಮಾಸ್ತಿ ಗ್ರಾಮದ ಚಿಕ್ಕಮುನಿಯಪ್ಪ (82) ಅವರ ಎರಡು ಕಣ್ಣುಗಳನ್ನು ಶುಕ್ರವಾರ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ.

ನೋವಿನಲ್ಲೂ ಕಣ್ಣುಗಳನ್ನು ದಾನ ಮಾಡಿ ಕುಟುಂಬ ಸಾರ್ಥಕತೆ ಮೆರೆದಿದೆ. 

‘ನನ್ನ ತಂದೆಯ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ. ಜಗದ ಬೆಳಕು ಭಗವಾನ್ ಬುದ್ಧರು ನಮಗೆ ದಾರಿ ದೀಪ. ನೇತ್ರದಾನಿ ಪುನೀತ್ ರಾಜಕುಮಾರ್ ನಮಗೆ ಮಾದರಿ. ನಾವು ಇಂದು ನಮ್ಮ ಅಪ್ಪನನ್ನು ಕಳೆದುಕೊಂಡಿರಬಹುದು. ಅವರ ಕಣ್ಣುಗಳು ನಮ್ಮೊಂದಿಗೆ ಬದುಕಿರುತ್ತವೆ’ ಎಂದು ಚಿಕ್ಕಮುನಿಯಪ್ಪ ಅವರ ಮಗಳು ಎಂ.ಸಿ.ಜಯಮಾಲ ತಿಳಿಸಿದರು.

ADVERTISEMENT

ಮೃತ ಚಿಕ್ಕಮುನಿಯಪ್ಪ ಅವರ ಮಕ್ಕಳಾದ ಜಯಮಾಲ, ಶಂಕರ್, ಪ್ರಕಾಶ, ಸೋಮೇಶ್, ಹರೀಶ, ಕೆಂಪಣ್ಣ, ಹೊಸಬೆಳಕು ಟ್ರಸ್ಟಿನ ಜಿಗಣಿ ರಾಮಕೃಷ್ಣ, ಮಂಜುಳಾ ರಾಮಕೃಷ್ಣ, ನಾರಾಯಣ ನೇತ್ರಾಲಯದ ಅಶೋಕ್ ಮತ್ತು ಕುಟುಂಬಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.