ಮುಳಬಾಗಿಲು: ನಗರದ ಹೊರವಲಯದ ಎಸ್.ಡಿ.ಸಿ ಕಾಲೇಜಿನಲ್ಲಿ ಕರುನಾಡ ಕನ್ನಡ ಸಂಘದಿಂದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜಯಂತಿ ಆಚರಿಸಲಾಯಿತು.
ಈ ವೇಳೆ ಮಕ್ಕಳಿಗೆ ಪ್ರಬಂಧ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಎಸ್.ಡಿ.ಸಿ. ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಉಷಾ ಗಂಗಾಧರ್ ಮಾತನಾಡಿ, ‘ಗಡಿನಾಡು ಪ್ರದೇಶಗಳಲ್ಲಿ ತೆಲುಗು ಭಾಷೆ ಹೆಚ್ಚಾಗಿ ಬಳಕೆ ಇದ್ದರೂ, ಕನ್ನಡ ನಾಡು, ನುಡಿ, ಭಾಷೆ ಮತ್ತು ಸಾಹಿತ್ಯಕ್ಕೆ ನಮ್ಮ ಜನ ಮೊದಲ ಪ್ರಾಶಸ್ತ್ಯ ನೀಡಿದ್ದಾರೆ. ಇದೇ ಕಾರಣಕ್ಕೆ ಕನ್ನಡ ಭಾಷೆ ಜೀವಂತವಾಗಿದೆ’ ಎಂದರು.
ಬಿ.ಎಸ್.ವೆಂಕಟಚಲಪತಿ ಮಾತನಾಡಿ ಮಾಸ್ತಿಯವರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ. ಇದೇ ರೀತಿ ಸಾಧನೆ ಮಾಡಲು ಯುವಕರು ಹಾಗೂ ಯುವ ಕವಿಗಳು ಶ್ರಮಿಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಡಾ.ಶಂಕರಪ್ಪ ಹಾಗೂ ಬಿ.ಎಸ್. ವೆಂಕಟಾಚಲಪತಿ ಅವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬಗ್ಗೆ ಮಾತನಾಡಿದರು.
ಕರುನಾಡ ಕನ್ನಡ ಸಂಘದ ಅಧ್ಯಕ್ಷ ಈ.ಶ್ರೀನಿವಾಸಗೌಡ, ಅರುಣ್‌ಕುಮಾರ್, ಮುರಳಿಕೃಷ್ಣ, ನಂಜಾಮರಿ, ಎನ್.ದೀಕ್ಷಾ, ಅತ್ತಿಕುಂಟೆ ಎಸ್.ಸುಬ್ರಮಣಿ, ಸಿದ್ದಲಿಂಗಯ್ಯ, ಕೆ.ಸಿ.ವಿಜಯ್‌ಕುಮಾರ್, ಎಂ.ವಿ.ಸುಬ್ರಮಣಿ, ಚಂದ್ರಶೇಖರ್, ಚಂದ್ರಪ್ಪ, ಸೈಪ್‌ಉಲ್ಲಾ, ವಿವೇಕ್, ಬಾಬು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.