ADVERTISEMENT

ಮಾಸ್ತಿ | 'ಸಂಖ್ಯಾ ಕೋಡ್' ಸಂಶೋಧನ ಕೃತಿ ಬಿಡುಗಡೆ

ಕನ್ನಡ ಸಾಹಿತ್ಯಕ್ಕೆ ಹೊಸತು: ಕವಿ ಡಾ.ಎಚ್‌.ಎಸ್‌ ಶಿವಪ್ರಕಾಶ್‌ ‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:37 IST
Last Updated 18 ಜನವರಿ 2026, 6:37 IST
ಮಾಲೂರು ತಾಲೂಕಿನ ಮಾಸ್ತಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಕಲಾವಿದ ಶ್ರೀನಿವಾಸ್ ಎಚ್.ಎನ್ ರಚಿಸಿರುವ ಸಂಖ್ಯಾ ಕೋಡ್ ಸಂಶೋಧನ ಕೃತಿಯನ್ನು ಕವಿ, ನಾಟಕಕಾರ ಡಾ.ಎಚ್.ಎಸ್.ಶಿವಪ್ರಕಾಶ್ ಬಿಡುಗಡೆಗೊಳಿಸಿದರು
ಮಾಲೂರು ತಾಲೂಕಿನ ಮಾಸ್ತಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಕಲಾವಿದ ಶ್ರೀನಿವಾಸ್ ಎಚ್.ಎನ್ ರಚಿಸಿರುವ ಸಂಖ್ಯಾ ಕೋಡ್ ಸಂಶೋಧನ ಕೃತಿಯನ್ನು ಕವಿ, ನಾಟಕಕಾರ ಡಾ.ಎಚ್.ಎಸ್.ಶಿವಪ್ರಕಾಶ್ ಬಿಡುಗಡೆಗೊಳಿಸಿದರು   

ಮಾಸ್ತಿ (ಮಾಲೂರು): ಸಂಖ್ಯಾ ಕೋಡ್ ಪುಸ್ತಕ ಪ್ರಸ್ತುತ ಆಧುನಿಕ ಯುಗಕ್ಕೆ ಅತಿ ಮುಖ್ಯ. ಕಲಾವಿದ, ಲೇಖಕ ಶ್ರೀನಿವಾಸ್ ಎಚ್.ಎನ್ ಅವರ ಸಂಶೋಧನೆ ಮೂಲಕ ಸಂಖ್ಯೆಗಳನ್ನು ಬಳಸಿ ಕೃತಿ ರಚನೆ ಮಾಡಿದ್ದಾರೆ. ಇದು ಕನ್ನಡ ಸಾಹಿತ್ಯಕ್ಕೆ ಹೊಸತು ‌ಎಂದು ಹಿರಿಯ ಕವಿ, ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು.

ಮಾಸ್ತಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕಲಾವಿದ ಶ್ರೀನಿವಾಸ್ ಎಚ್.ಎನ್ ರಚಿಸಿರುವ ‘ಸಂಖ್ಯಾ ಕೋಡ್ ಸಂಶೋಧನಾ ಕೃತಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಭಾಷೆಗೆ ಮೊದಲು ಲಿಪಿ ಇರಲಿಲ್ಲ. ಹಲವು ವರ್ಷಗಳ ನಂತರ ಭಾಷೆ ಬೆಳೆದಂತೆ ಲಿಪಿಯೂ ರೂಪ ಪಡೆದುಕೊಂಡಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಇಂತಹ ಪುಸ್ತಕ ಬಂದಿರುವುದು ಇದೇ ಮೊದಲು ಎಂದು ಅಭಿಪ್ರಾಯಪಟ್ಟರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುಗದಲ್ಲಿ ಸಂಖ್ಯಾ ಕೋಡ್ ಭಾಷೆ ಅತಿಮುಖ್ಯವಾಗಿದೆ. ಇದನ್ನು ಪ್ರತಿಯೊಬ್ಬರೂ ಸುಲಭ ರೀತಿಯಲ್ಲಿ ಬಳಸಬಹುದಾಗಿದೆ. ಲೇಖಕ ಶ್ರೀನಿವಾಸ ರಚಿಸಿರುವ ಈ ಸಂಖ್ಯಾ ಕೋಡ್ ಪುಸ್ತಕ ಇದಕ್ಕೆ ನೆರವಾಗಲಿದೆ. ಹಲವು ವರ್ಷಗಳ ಕಾಲ ಸಂಶೋಧನೆ ನಡೆಸಿ ಈ ಕೃತಿಯನ್ನು ರಚಿಸಲಾಗಿದೆ. ಭಾಷೆ ಬದಲಿಗೆ ಸಂಖ್ಯೆಗಳನ್ನೇ ಬಳಸಿ ಸಂವಹನ ನಡೆಸಬಹುದು. ಉದಾಹರಣೆಗೆ ಬಾರ್ ಕೋಡ್ ಲಾಂಗ್ವೆಜ್, ಬ್ರೈನ್ ಲಿಪಿ, ಡಿಫೆನ್ಸ್ ನಲ್ಲಿ ಬಳಸುವ ಕೋಡ್ ಭಾಷೆ ಇದೇ ಮಾದರಿಯನ್ನು ಅನುಸರಿಸುತ್ತದೆ ಎಂದರು.

ಸಾಹಿತಿ ಡಾ.ನಾ.ಮುನಿರಾಜು,‌ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಸಿ.ರಮೇಶ್ ಹಾಗೂ ಸಂಖ್ಯಾ ಕೋಡ್ ಕೃತಿ ಲೇಖಕ ಶ್ರೀನಿವಾಸ್ ಎಚ್.ಎನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ವಿ.ಹನುಮಂತಯ್ಯ, ಹೋಬಳಿ ಘಟಕದ ಅಧ್ಯಕ್ಷ ಬೆಡಿಶೆಟ್ಟಳ್ಳಿ ರಮೇಶ್, ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಕ್ರಂಪಾಷಾ, ಪ್ರಾಂಶುಪಾಲ ರಾಮಣ್ಣ, ಉಪ ಪ್ರಾಂಶುಪಾಲ ವೆಂಕಟಪ್ಪ, ರಂಗ ವಿಜಯ ಟ್ರಸ್ಟ್ ಅಧ್ಯಕ್ಷ ಮಾಲೂರು ವಿಜಿ, ಕದಂಬ ಕನ್ನಡ ಕಲಾ ಸಂಘದ ಅಧ್ಯಕ್ಷ ಎಂ.ವಿ.ರವಿಕುಮಾರ್, ಗ್ರಾ.ಪಂ ಉಪಾಧ್ಯಕ್ಷ ಜಿ.ಸಿ.ನಾರಾಯಣಸ್ವಾಮಿ, ಸದಸ್ಯ ಜೆಸಿಬಿ ನಾಗರಾಜ್, ಸುಭಾಷ್ ಚಂದ್ರ, ಎ.ಅಶ್ವಥ್ ರೆಡ್ಡಿ, ಎ.ಕೆ.ವೆಂಕಟೇಶ್, ಟೆಂಪೊ ಮುನಿಯಪ್ಪ, ಪ್ರವೀಣ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.