ಚನ್ನಪಟ್ಟಣ: ತಾಲ್ಲೂಕಿನ ಹೊಟ್ಟಿಗನ ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬೋರ್ ವೆಲ್ ರಾಮಚಂದ್ರು, ಉಪಾಧ್ಯಕ್ಷರಾಗಿ ನಿಂಗರಾಜು ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ನಡೆಯಿತು.
ಬೋರ್ ವೆಲ್ ರಾಮಚಂದ್ರು ಅಧ್ಯಕ್ಷರಾಗಿ ಸತತ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು ವಿಶೇಷ. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಬಿ.ಕೆ.ಮಂಜುನಾಥ್ ಕಾರ್ಯನಿರ್ವಹಿಸಿದರು.
ನಿರ್ದೇಶಕರಾದ ವೆಂಕಟೇಶ್, ಚಿಕ್ಕಮರಿಗೌಡ, ವೆಂಕಟ (ತಮ್ಮಯ್ಯ), ಎಚ್.ಕೆ ತಿಮ್ಮೆಗೌಡ, ವಿಜೇಂದ್ರ, ಸಿದ್ದರಾಜು, ತಾಯಮ್ಮ, ಗೌರಮ್ಮ, ಪ್ರೇಮಾ, ಗ್ರಾ.ಪಂ.ಸದಸ್ಯ ವೆಂಕಟೇಶ್, ಸಂಘದ ಸಿಇಒ ಎಚ್.ಆರ್. ಪುಟ್ಟೇಗೌಡ, ಹಾಲು ಪರೀಕ್ಷಕ ಎಚ್.ಟಿ.ಪ್ರಸನ್ನ, ಗುಮಾಸ್ತ ರಾಮಚಂದ್ರ, ಸಹಾಯಕ ಗೋವಿಂದರಾಜು, ಮುಖಂಡರಾದ ಎಚ್.ಆರ್.ರಮೇಶ್, ಎಚ್.ಆರ್.ಪ್ರಕಾಶ್, ಎಚ್.ಟಿ.ಮಂಜು, ಮಹದೇವ್, ದಿನೇಶ್, ಅಶೋಕ್, ಚಾಮರಾಜು, ಇತರರು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.