ADVERTISEMENT

ಅಟಲ್ ಭೂಜಲ ಯೋಜನೆ ತಾಂತ್ರಿಕ ತರಬೇತಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 13:09 IST
Last Updated 27 ಡಿಸೆಂಬರ್ 2024, 13:09 IST
ಮುಳಬಾಗಿಲು ತಾಲ್ಲೂಕಿನ ಬೈರಕೂರು ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಅಟಲ್ ಭೂಜಲ ಯೋಜನೆ ತರಬೇತಿ ಕಾರ್ಯಕ್ರಮ ನಡೆಯಿತು
ಮುಳಬಾಗಿಲು ತಾಲ್ಲೂಕಿನ ಬೈರಕೂರು ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಅಟಲ್ ಭೂಜಲ ಯೋಜನೆ ತರಬೇತಿ ಕಾರ್ಯಕ್ರಮ ನಡೆಯಿತು   

ಮುಳುಬಾಗಿಲು: ತಾಲ್ಲೂಕಿನ ಬೈರಕೂರು ಹೋಬಳಿ ಕೇಂದ್ರದಲ್ಲಿ ಶುಕ್ರವಾರ ಭೂಜಲ ಯೋಜನೆಯ ತಾಂತ್ರಿಕ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೃಷಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ನಾಗರಾಜ್, ‘ರೈತರು ಅಟಲ್ ಭೂಜಲ ಯೋಜನೆಯಡಿ ಸಿಗುವ ಸವಲತ್ತುಗಳನ್ನು ಸದುಪಯೋಗಪಡೆದುಕೊಳ್ಳಬೇಕು. ವ್ಯವಸಾಯದಲ್ಲಿ ತರಬೇತಿ ತಾಂತ್ರಿಕತೆ ಬೆಳೆಸಿಕೊಂಡು ಉತ್ತಮ ರೀತಿಯ ಬೆಳೆಗಳನ್ನು ಬೆಳೆಯಬೇಕು’ ಎಂದು ಸಲಹೆ ನೀಡಿದರು. 

ಅಟಲ್ ಭೂಜಲ ಯೋಜನೆಯನ್ನು ಈಗಾಗಲೇ ಕೆಲವು ರೈತರು ಸದ್ಬಳಕೆ ಮಾಡಿಕೊಂಡು ವಾಣಿಜ್ಯ ಹಾಗೂ ಉನ್ನತ ಮಟ್ಟದ ಬೆಳೆ ಬೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದರು. 

ADVERTISEMENT

ಯೋಜನೆಯಲ್ಲಿ ನೀರಿನ ಬೇಡಿಕೆ ಕಡಿಮೆ ಮಾಡುವುದು, ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ಕ್ರಮಗಳ ಕುರಿತು ತಾಲ್ಲೂಕು ಸಹಾಯಕ ನಿರ್ದೇಶಕ ರವಿಕುಮಾರ್ ರೈತರಿಗೆ ತರಬೇತಿ ನೀಡಿದರು.

ಬೈರಕೂರು ಕೃಷಿ ಅಧಿಕಾರಿ ಅಕ್ಷಯ್ ಕುಮಾರ್, ಸಂಜಯ್, ರಘು, ಸುರೇಶ್, ಮಹೇಶ್, ಸೀನಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.