ADVERTISEMENT

ಮುಳಬಾಗಿಲು: ಆದಿಜಾಂಬವ ಜಾತ್ರೆ ನಾಳೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:06 IST
Last Updated 10 ಫೆಬ್ರುವರಿ 2026, 5:06 IST
ಮುಳಬಾಗಿಲು ತಾಲ್ಲೂಕಿನ ಆವಣಿ ಶ್ರೀ ಆದಿಜಾಂಭವ ಜಾತ್ರಾ ಮಹೋತ್ಸವ ಕರಪತ್ರಗಳನ್ನು ಟ್ರಸ್ಟ್ ವತಿಯಿಂದ ಬಿಡುಗಡೆ ಮಾಡಿದರು.
ಮುಳಬಾಗಿಲು ತಾಲ್ಲೂಕಿನ ಆವಣಿ ಶ್ರೀ ಆದಿಜಾಂಭವ ಜಾತ್ರಾ ಮಹೋತ್ಸವ ಕರಪತ್ರಗಳನ್ನು ಟ್ರಸ್ಟ್ ವತಿಯಿಂದ ಬಿಡುಗಡೆ ಮಾಡಿದರು.   

ಮುಳಬಾಗಿಲು: ತಾಲ್ಲೂಕಿನ ಆವಣಿಯಲ್ಲಿ ಫೆಬ್ರುವರಿ 11ರ ಬುಧವಾರ ಆದಿಜಾಂಬವಂತ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಪ್ರಥಮ ಪೂಜಾ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ನಡೆಯಲಿವೆ.

ಜಾತ್ರೆಗೆ ಜನಸಾಮಾನ್ಯರು ಮತ್ತು ಭಕ್ತರು ಆಗಮಿಸಬೇಕು ಎಂದು ಆದಿಜಾಂಬವಂತ ದೇವಾಲಯ ಮತ್ತು ಮಠದ ಅಭಿವೃದ್ಧಿ ಸೇವಾ ಸಮಿತಿ ಟ್ರಸ್ಟ್ ಸಮಿತಿ ತಿಳಿಸಿದೆ. 

ನಗರದ ಪ್ರವಾಸಿ ಮಂದಿರದಲ್ಲಿ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಸಮಿತಿಯವರು, ಆವಣಿಯ‌ ಕಾಶಿ ವಿಶ್ವೇಶ್ವರಸ್ವಾಮಿ ರಥೋತ್ಸವಕ್ಕೂ ಮುನ್ನ ಆದಿ ಜಾಂಬವಂತ ಸ್ವಾಮಿ ಜಾತ್ರೆ ಹಾಗೂ ಪ್ರಥಮ ಪೂಜೆ ನಡೆಸುವುದು ವಾಡಿಕೆ. ಈ ಪ್ರಕಾರ ಬುಧವಾರ ನಡೆಯಲಿರುವ ಜಾತ್ರೆ ಹಾಗೂ ಪ್ರಥಮ ಪೂಜೆಗೆ ಹೆಚ್ಚಿನ ಸಂಖ್ಯೆ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು. 

ADVERTISEMENT

ಟ್ರಸ್ಟ್ ಅಧ್ಯಕ್ಷ ಕಗ್ಗಿನಹಳ್ಳಿ ಶ್ರೀನಿವಾಸ್, ಎಂ.ಎಸ್.ನಾರಾಯಣ ಸ್ವಾಮಿ, ಸಿ.ಆರ್.ಪಿ.ವೆಂಕಟೇಶ್, ಬಿ.ಮುನಿಯಪ್ಪ, ಎಂ.ವಿ.ನಾಗರಾಜ್, ಚಿಕ್ಕವೆಂಕಟಸ್ವಾಮಿ, ಚಂದ್ರಪ್ಪ, ಶೇಷಪ್ಪ, ಶ್ರೀನಿವಾಸ್, ನಟರಾಜ್, ಜಯಪ್ಪ, ಹನುಮಪ್ಪ, ನರಸಿ, ಚಲಪತಿ, ವೆಂಕಟರಾಮಪ್ಪ, ಸುರೇಶ್, ರೆಡ್ಡೆಪ್ಪ, ವೆಂಕಟೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.