
ಮುಳಬಾಗಿಲು: ತಾಲ್ಲೂಕಿನ ಆವಣಿಯ ರಾಮಲಿಂಗೇಶ್ವರ ರಥೋತ್ಸವ ಮತ್ತು ದನಗಳ ಜಾತ್ರೆ ಇದೇ 17ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಆವಣಿ ಗ್ರಾಮ, ದೇವಾಲಯ ಮತ್ತು ಆವಣಿ ಬೆಟ್ಟದ ಸ್ವಚ್ಛತೆಗೊಳಿಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಆವಣಿಯಲ್ಲಿನ ರಾಮಲಿಂಗೇಶ್ವರ ದೇವಾಲಯದಲ್ಲಿ ಫೆ. 11ರಂದು ಅಂಕುರಾರ್ಪಣೆ, 12ಕ್ಕೆ ಮಂಟಪೋತ್ಸವ, 13ಕ್ಕೆ ಸಿಂಹ ವಾಹನೋತ್ಸವ, 14ಕ್ಕೆ ಶೇಷ ವಾಹನೋತ್ಸವ, 15ರಂದು 108 ಲೀಟರ್ ಕ್ಷೀರಾಭಿಷೇಕ ಹಾಗೂ ರುದ್ರಾಭಿಷೇಕ, 16ರಂದು ಕಲ್ಯಾಣೋತ್ಸವ ಸೇರಿದಂತೆ 27ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಎಲ್ಲ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ, ತಹಶೀಲ್ದಾರ್ ವಿ. ಗೀತಾ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ವಿ. ಬಾಬು ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಎಎಸ್‌ಪಿ ಮನಿಷಾ ಮೋಹಿನ್ ನೇತೃತ್ವದಲ್ಲಿ ರಕ್ಷಣಾ ಕ್ರಮ ಕೈಗೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.