
ಮುಳಬಾಗಿಲು: ಊರಿನ ಸ್ವಚ್ಛತೆ ನಮ್ಮೆಲ್ಲರ ಹೊಣೆ. ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೆ ಗಂಭೀರ ಹಾನಿ ಉಂಟಾಗುತ್ತದೆ. ಹಾಗಾಗಿ ಗ್ರಾಮಸ್ಥರೆಲ್ಲರೂ ಪ್ಲಾಸ್ಟಿಕ್ ತ್ಯಜಿಸುವ ಮೂಲಕ ಸ್ವಚ್ಛ ಗ್ರಾಮಕ್ಕೆ ಮುಂದಾಗಬೇಕೆಂದು ಕವಿ ಗೋಪಿನಾಥ್ ಕರವಿ ಕಿವಿಮಾತು ಹೇಳಿದರು.
ತಾಲ್ಲೂಕಿನ ಕರವಿರೆಡ್ಡಿಹಳ್ಳಿ ಗ್ರಾಮದಲ್ಲಿ ಬುಧವಾರ ನಮ್ಮೂರಿಗಾಗಿ ನಾವು ಅಭಿಯಾನದ ಕುರಿತು ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮಸ್ಥರು ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯವನ್ನು ಹಾಕಬೇಡಿ. ಗ್ರಾಮೀಣ ಭಾಗದ ಜನತೆ ಸ್ವಚ್ಛತೆ ಕುರಿತು ಜಾಗೃತಿ ಕೊರತೆಯಿಂದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಪರಿಸರಕ್ಕೂ ಇದು ಅಪಾಯಕಾರಿ. ಹಾಗಾಗಿ ಎಲ್ಲರೂ ಸೇರಿ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮವನ್ನು ರೂಪಿಸಬೇಕು ಎಂದು ಹೇಳಿದರು.
ಗೋಪಿನಾಥ್, ನಾರಾಯಣಮ್ಮ, ಮುನಿವೆಂಕಟರಾಮಪ್ಪ, ಕೆ.ಎಚ್.ರಾಮಪ್ಪ, ಆನಂದಪ್ಪ, ಬಾಬಣ್ಣ, ಶೋಭಾ ರಾಮಪ್ಪ, ಜಿ. ವೆಂಕಟರವಣಪ್ಪ, ಕಿಟ್ಟಪ್ಪ, ನರಸಿಂಹಪ್ಪ, ಮುರಳಿ, ಪ್ರಶಾಂತ್, ವಂಶಿ, ಹರೀಶ್, ಪ್ರತೀಪ್, ಸುಬ್ರಮಣಿ, ಸುರೇಶ್ ಕುಮಾರ್, ವರುಣ್, ದಿಲೀಪ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.