ADVERTISEMENT

ಮುಳಬಾಗಿಲು: ಕಾಲುವೆಗೆ ಬಿದ್ದಿದ್ದ ಬಾಲಕರ ರಕ್ಷಣೆ

ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:10 IST
Last Updated 16 ಅಕ್ಟೋಬರ್ 2025, 7:10 IST
ಮುಳಬಾಗಿಲು ನಗರದ ದೊಡ್ಡ ಕಾಲುವೆಯಲ್ಲಿ ಬಿದ್ದಿದ್ದ ಬಾಲಕರ ರಕ್ಷಣೆ
ಮುಳಬಾಗಿಲು ನಗರದ ದೊಡ್ಡ ಕಾಲುವೆಯಲ್ಲಿ ಬಿದ್ದಿದ್ದ ಬಾಲಕರ ರಕ್ಷಣೆ   

ಮುಳಬಾಗಿಲು: ಮುಳಬಾಗಿಲು ನಗರದ ದೊಡ್ಡ ಕಾಲುವೆಗೆ ಬಿದ್ದಿದ್ದ ಇಬ್ಬರು ಬಾಲಕರನ್ನು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯು ಸ್ಥಳೀಯ ಯುವಕರ ನೆರವಿನಿಂದ ಬುಧವಾರ ರಕ್ಷಣೆ ಮಾಡಿದ್ದಾರೆ. 

ನಗರದ ಅಂಜನಾದ್ರಿ ಬೆಟ್ಟದ ತಪ್ಪಲಿನ ನಿವಾಸಿಗಳಾದ ಇಬ್ಬರು ಬಾಲಕರು ನಗರದ ಪಾದರಾಜ ಮಠದ ಮುಂದಿನ ದೊಡ್ಡ ಕಾಲುವೆಗೆ ಬಿದ್ದಿದ್ದರು. 

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಎಎಸ್‌ಪಿ ಮನೀಷಾ ಅವರ ನೇತೃತ್ವದ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿ, ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.