ADVERTISEMENT

ಮುಷ್ಟ್ರಹಳ್ಳಿ: ಉಚಿತ ಆರೋಗ್ಯ ತಪಾಸಣೆ ಶಿಬಿರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:14 IST
Last Updated 21 ಜೂನ್ 2025, 14:14 IST
<div class="paragraphs"><p>Mushtrahalli: Free health check-up campಬಂಗಾರಪೇಟೆ ತಾಲ್ಲೂಕಿನ ಮುಷ್ಟ್ರಹಳ್ಳಿಯಲ್ಲಿ ಶನಿವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಜಯಣ್ಣ ಚಾಲನೆ ನೀಡಿದರು</p></div>

Mushtrahalli: Free health check-up campಬಂಗಾರಪೇಟೆ ತಾಲ್ಲೂಕಿನ ಮುಷ್ಟ್ರಹಳ್ಳಿಯಲ್ಲಿ ಶನಿವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಜಯಣ್ಣ ಚಾಲನೆ ನೀಡಿದರು

   

ಬಂಗಾರಪೇಟೆ: ತಾಲ್ಲೂಕಿನ ಮುಷ್ಟ್ರಹಳ್ಳಿ ಗ್ರಾಮದಲ್ಲಿ ತಿರುಮಲ ಹಾಲಿನ ಡೇರಿ, ಹುರಿಕೇನ್ ವೆಟ್ಸ್ ಚಾರಿಟಬಲ್ ಟ್ರಸ್ಟ್ ಮತ್ತು ಪಿಇಎಸ್ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು. 

ದೋಣಿಮಡಗು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಜಯಣ್ಣ ಮಾತನಾಡಿ, ‘ಆರೋಗ್ಯವು ಜೀವನದ ಅತ್ಯಂತ ಅಮೂಲ್ಯವಾದ ಆಸ್ತಿ. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ದೀರ್ಘಾಯುಷ್ಯ ಮತ್ತು ಸಂತೋಷದಿಂದ ಜೀವನ ನಡೆಸಬಹುದು’ ಎಂದರು. 

ADVERTISEMENT

ತಿರುಮಲ ಡೇರಿ ಪ್ರಾಂತೀಯ ವ್ಯವಸ್ಥಾಪಕ ಕೆ.ವಿ. ರಾಜಣ್ಣ ಮಾತನಾಡಿದರು.

300ಕ್ಕೂ ಹೆಚ್ಚು ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಎಲ್ಲರಿಗೂ ಉಚಿತವಾಗಿ ಔಷಧ ವಿತರಿಸಲಾಯಿತು. 

ಶಿಬಿರದಲ್ಲಿ ಅಹಿಂದ ಜಿಲ್ಲಾ ಅಧ್ಯಕ್ಷ ಎಸ್.ಕೆ. ಜಯಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಎಂ.ವಿ. ಸಂತೋಷ, ತಿಮ್ಮಪ್ಪ, ಬಸಪ್ಪ, ವ್ಯವಸ್ಥಾಪಕ ಚಂದ್ರಶೇಖರನ್, ಪ್ರಭಾಕರ್ ರೆಡ್ಡಿ, ಸುರೇಶ್, ಡಾ.ಜಯಬಾಲ, ಪಿಆರ್‌ಒ ವೆಂಕಟೇಶ್, ಹುರಿಕೇಶ್ ಚಾರಿಟಬಲ್ ಟ್ರಸ್ಟ್ ಡಾಕ್ಟರ್ ಗಣೇಶ, ಆನಂದ್ ಕುಮಾರ್, ಪಿಇಎಸ್ ಆಸ್ಪತ್ರೆ ಡಾ ಹರೀಶ್, ಸಂತೋಷ್, ಚಿನ್ಮಯಿ ಗುಪ್ತಾ, ತಿರುಮಲ ಡೇರಿ ಸಂಪಂಗಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.