ADVERTISEMENT

ನಾಡಿನ ಭಾಷೆಗೆ ಆಧ್ಯತೆ ನೀಡಿ: ಕೋಲಾರ ಜಿ.ಪಂ.ಅಧ್ಯಕ್ಷ ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 10:57 IST
Last Updated 30 ಡಿಸೆಂಬರ್ 2019, 10:57 IST
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಭೂಮಿ ನಂದನ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡಪರ ಸಂಘಟನೆಗಳ ಸಹಾಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಚಾಲನೆ ನೀಡಿದರು.
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಭೂಮಿ ನಂದನ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡಪರ ಸಂಘಟನೆಗಳ ಸಹಾಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಚಾಲನೆ ನೀಡಿದರು.   

ಕೋಲಾರ: ‘ಮನೆ ಭಾಷೆ ಯಾವುದೇ ಆಗಿದ್ದರೂ, ನಾಡಿನ ಭಾಷೆಗೆ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸಲಹೆ ನೀಡಿದರು.

ತಾಲ್ಲೂಕಿನವೇಮಗಲ್‌ನಲ್ಲಿ ಭೂಮಿ ನಂದನ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡಪರ ಸಂಘಟನೆಗಳ ಸಹಾಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ನಾಡಿನಲ್ಲಿ ಋಣದಲ್ಲಿ ನಾವೆಲ್ಲ ವಾಸವಿದ್ದು, ಕನಿಷ್ಟ ಭಾಷೆ ಬಳಕೆ ಮಾಡುವ ಮೂಲಕ ನೆಲದ ಋಣ ತೀರಿಸಿಕೊಳ್ಳಲು ಮುಂದಾಗೊಣ’ ಎಂದು ಹೇಳಿದರು.

ಜನಪದ ಕಲಾ ತಂಡಗಳ ಪ್ರದರ್ಶನವು ಜನರ ಮನಸೊರೆಗೊಂಡಿತು. ಗಣ್ಯರು ಹಾಗೂ ಕನ್ನಡ ಅಭಿಮಾನಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಆಟೋ ಜಾಥದ ಜತೆ ಕನ್ನಡಪರ ಸಂಘಟನೆಗಳ ಸದಸ್ಯರು ಹಾಗೂ ಯುವಕರು ಮೆರವಣಿಗೆ ಉದ್ದಕ್ಕೂ ಕುಣಿದು ಸಂಭ್ರಮಿಸಿದರು.

ADVERTISEMENT

ಸಂಜೆ ವೇಮಗಲ್ಲಿನ ಸಂತೆ ಮೈದಾನದಲ್ಲಿ ಜೂನಿಯರ್ ಉಪ್ಪಿ ನಾಗರಾಜ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.ಜೀ ಕನ್ನಡ ಸರಿಗಮಪ ಚಾಂಪಿಯನ್ ಹನುಮಂತ್, ರಿಷಿ, ಕನ್ನಡ ಕೋಗಿಲೆ ಪುರುಷೋತ್ತಮ್, ಸೂಪರ್ ಸಿಂಗರ್ ಸುಬ್ರಮಣಿ, ಸ್ಟಾರ್ ಆಫ್ಕೋಲಾರದ ಹನಿ ರಾಮ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ರವಿಚಂದ್ರನ್ ಹಾಗೂ ಸೂಪರ್ ಸಿಂಗರ್ ಸೌಮ್ಯ ಸೇರಿದ ಸಾರ್ವಜನಿಕರ ಮನಸೂರೆಗೊಂಡರು.

ಪೇಜಾವರಶ್ರೀಗಳ ನಿಧನದ ಹಿನ್ನಲೆ ಪೇಜಾವರಶ್ರೀಗಳಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಿ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ತಾಲ್ಲೂಕು ಪಂಚಾಯಿತಿ ಸದಸ್ಯ ವಿ.ಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಶಿಕಲಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.