ಬೇತಮಂಗಲ: ಕೋಡಿಹಳ್ಳಿ ಗ್ರಾಮದ ಹೊರ ವಲಯದಲ್ಲಿ 15ಕ್ಕೂ ಹೆಚ್ಚು ಕುಟುಂಬಗಳು ಸುಮಾರು 20 ವರ್ಷಗಳಿಂದ ಗುಡಿಸಲುಗಳನ್ನೇ ಆಶ್ರಯಿಸಿಕೊಂಡು ಜೀವನ ಸಾಗಿಸುತ್ತಿವೆ. ಈ ಗುಡಿಸಲುಗಳಲ್ಲಿ ವಾಸಿಸುವ ಜನರು ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಜೀವನ ದೂಡುತ್ತಿದ್ದಾರೆ. ಇಷ್ಟಾಗ್ಯೂ, ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳು ತಮ್ಮ ನೆರವಿಗೆ ಬಂದಿಲ್ಲ ಎಂಬುದು ಈ ಜನರ ಆರೋಪ.
ದಿನಗೂಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಕುಟುಂಬಗಳ ಸದಸ್ಯರಿಗೆ ಸ್ವಂತ ಜಾಗ, ಸ್ವಂತ ಮನೆಯೂ ಇಲ್ಲ. ಈ ಗುಡಿಸಲುಗಳಲ್ಲಿ ಕುಡಿಯುವ ನೀರು, ವಿದ್ಯುತ್, ಚರಂಡಿ ಮತ್ತು ಸೇರಿದಂತೆ ಯಾವುದೇ ಸೌಲಭ್ಯಗಳು ಇಲ್ಲ. ಜೊತೆಗೆ ಸರ್ಕಾರದಿಂದ ಉಚಿತ ಅಕ್ಕಿ ಪಡೆಯಲು ಅಗತ್ಯವಿರುವ ಪಡಿತರ ಚೀಟಿಯು ಈ ಜನರ ಬಳಿ ಇಲ್ಲ. ಅನಾದಿ ಕಾಲದಿಂದಲೂ ಈ ಕುಟುಂಬಸ್ಥರು ಇಲ್ಲಿಯೇ ವಾಸಿಸುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಂಡುಕಾಣದಂತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಈ ಗುಡಿಸಲು ನಿವಾಸಿಗಳಿಗೆ ಒಬ್ಬರಿಗೆ ಕನಿಷ್ಠ ನಾಲ್ವರು ಮಕ್ಕಳಿದ್ದಾರೆ. ಆದರೆ, ದಿನಗೂಲಿ ಮಾಡಿ ಜೀವನ ಸಾಗಿಸುವುದೇ ದುಸ್ತರವಾಗಿರುವ ಕಾರಣ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ಶಾಲೆಗೆ ಹೋಗುವವರ ಸಂಖ್ಯೆ ಬೆರಳಿಕೆಯಷ್ಟು ಮಾತ್ರ. ಕೆಲವು ಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿದ ಬಳಿಕ ಶಾಲೆಯತ್ತ ಮುಖವೇ ಮಾಡುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಸಾಂಕ್ರಾಮಿಕ ರೋಗದ ಭೀತಿ: ಗುಡಿಸಲುಗಳಿಂದ ಬಿಡುಗಡೆಯಾಗುವ ಕೊಳಚೆ ನೀರು ಸರಾಗವಾಗಿ ಹರಿದುಹೋಗಲು ಚರಂಡಿ ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತದೆ. ನೀರು ಸರಾಗವಾಗಿ ಹರಿದುಹೋಗದ ಕಾರಣ ಸೊಳ್ಳೆಗಳ ಆವಾಸಸ್ಥಾನವಾಗಿದೆ. ಇದರ ಪರಿಣಾಮ ಸಾಂಕ್ರಮಿಕ ರೋಗ ರುಜಿನಗಳು ವ್ಯಾಪಿಸಬಹುದೆಂಬ ಆತಂಕಕ್ಕೆ ಸಿಲುಕಿದ್ದಾರೆ.
ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸಂದರ್ಭಗಳಲ್ಲಿ ಪ್ರಚಾರಕ್ಕೆ ಬರುವ ಅಭ್ಯರ್ಥಿಗಳು ಮತ್ತು ಪಕ್ಷದ ಮುಖಂಡರು, ನಮಗೆ ಮೂಲಸೌಕರ್ಯಗಳು, ಮಕ್ಕಳಿಗೆ ಶಿಕ್ಷಣ,
20 ವರ್ಷಗಳಿಂದ ಇಲ್ಲಿಯೇ ವಾಸ ಮಾಡುತ್ತಿದ್ದೇವೆ. ಸರ್ಕಾರದಿಂದ ಸಿಗುವ ಅಕ್ಕಿ ಪಡೆಯಲು ಬೇಕಿರುವ ಪಡಿತರ ಚೀಟಿಯೂ ಇಲ್ಲ. ನಮ್ಮ ಈ ಸಂಕಷ್ಟ ಯಾರ ಬಳಿ ಹೇಳಬೇಕು ಎನ್ನುವುದೇ ತಿಳಿಯದಾಗಿದೆ.ಹೆಸರು ಹೇಳಲಿಚ್ಚಿಸದ ಗುಡಿಸಲು ನಿವಾಸಿ ಕೋಡಿಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.