ADVERTISEMENT

ಮಾಲೂರು: ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 5:30 IST
Last Updated 4 ಫೆಬ್ರುವರಿ 2026, 5:30 IST
<div class="paragraphs"><p>ಮಾಲೂರು ತಾಲ್ಲೂಕಿನ ನೊಸಗೆರೆ ಗ್ರಾ.ಪಂ.ವ್ಯಾಪ್ತಿಯ ಮಾದನಹಟ್ಟಿ ಬಳಿ ಮಂಗಳವಾರ ಪಂಚಾಯಿತಿ ವತಿಯಿಂದ ₹40 ಲಕ್ಷ ವೆಚ್ಚದ ಪ್ಲಾಸ್ಟಿಕ್ ನಿರ್ವಹಣಾ ಘಟಕವನ್ನು ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು</p></div>

ಮಾಲೂರು ತಾಲ್ಲೂಕಿನ ನೊಸಗೆರೆ ಗ್ರಾ.ಪಂ.ವ್ಯಾಪ್ತಿಯ ಮಾದನಹಟ್ಟಿ ಬಳಿ ಮಂಗಳವಾರ ಪಂಚಾಯಿತಿ ವತಿಯಿಂದ ₹40 ಲಕ್ಷ ವೆಚ್ಚದ ಪ್ಲಾಸ್ಟಿಕ್ ನಿರ್ವಹಣಾ ಘಟಕವನ್ನು ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು

   

ಮಾಲೂರು: ತಾಲ್ಲೂಕಿನ ನೊಸಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದನಹಟ್ಟಿ ಬಳಿ ಮಂಗಳವಾರ ₹40 ಲಕ್ಷ ವೆಚ್ಚದ ಪ್ಲಾಸ್ಟಿಕ್ ನಿರ್ವಹಣಾ ಘಟಕಕ್ಕೆ ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲೇ ಮೊದಲ ಬಾರಿಗೆ ನೊಸಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಲಾಗಿದೆ ಎಂದರು.

ADVERTISEMENT

ನೊಸಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ಹಾಗಾಗಿ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ಸರ್ಕಾರದ ಅನುದಾನಕ್ಕೆ ಕಾಯಬೇಕಾ ಅಗತ್ಯವಿಲ್ಲ. ಪಂಚಾಯಿತಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತದೆ. ಪಂಚಾಯಿತಿ ಅನುದಾನದಲ್ಲಿ 26 ಐಮಾಸ್ಟ್ ದೀಪಗಳನ್ನು ನಿರ್ಮಿಸಲಾಗಿದೆ. ತಲಾ ₹25 ಲಕ್ಷದಲ್ಲಿ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ಹಾಗೂ ₹3 ಕೋಟಿ ವೆಚ್ಚದಲ್ಲಿ ಎಲ್ಲಾ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಪಿಚ್ಚಗುಂಟ್ರಹಳ್ಳಿಯಲ್ಲಿ ₹ 5 ಲಕ್ಷ ವೆಚ್ಚದಲ್ಲಿ ಗೋವು ಕುಂಟೆ ನಿರ್ಮಾಣ ಮಾಡಲಾಗಿದೆ. ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಸರಬರಾಜಿಗಾಗಿ ₹40 ಲಕ್ಷ ಖರ್ಚು ಮಾಡಲಾಗಿದೆ. ಪ್ರಸ್ತುತ ಸ್ವಚ್ಛತಾ ಘಟಕ ನಿರ್ಮಾಣಕ್ಕೆ ₹40 ಲಕ್ಷ ಅನುದಾನ ನೀಡಲಾಗಿದೆ. ಈ ಎಲ್ಲಾ ಯೋಜನೆಗಳನ್ನು ಪಂಚಾಯಿತಿ ವತಿಯಿಂದ ರೂಪಿಸಲಾಗಿದೆ. ಇದಕ್ಕೆ ಸರ್ಕಾರಕ್ಕೆ ಯಾವುದೇ ಅನುದಾನ ನೀಡಲ್ಲ ಎಂದರು.

ಫೆ.6ರಂದು ಜಿಲ್ಲೆಯಲ್ಲಿ ಗ್ಯಾರಂಟಿ ಸಮಾವೇಶವಿದೆ. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷ ರೇವಣ್ಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಈ ವೇಳೆ ಪಂಚಾಯಿತಿ ವತಿಯಿಂದ ಅಂಗವಿಕಲರಿಗೆ ಎರಡು ಚಕ್ರದ ಕುರ್ಚಿಗಳನ್ನು ವಿತರಿಸಲಾಯಿತು. ನೊಸಗೆರೆ ಗ್ರಾ.ಪಂ.ಅಧ್ಯಕ್ಷೆ ಸರಸಮ್ಮ ವೆಂಕಟೇಶಪ್ಪ, ಉಪಾಧ್ಯಕ್ಷೆ ಸರಸ್ವತಮ್ಮ, ರೇಣುಕಾ ನಾರಾಯಣಸ್ವಾಮಿ, ದೀಪ, ಚಂದ್ರಶೇಖರ್, ವಿನಯ್ ಗೌಡ, ಪ್ರಶಾಂತ್‌, ಅಶೋಕ್ ಕುಮಾರ್, ಈಶ್ವರ್, ಕೂರಂಡಹಳ್ಳಿ ರಮೇಶ್, ನಾರಾಯಣಸ್ವಾಮಿ, ಹರ್ಷಿಯಾ, ಲಾವಣ್ಯ, ಆಂಜಿನಪ್ಪ, ಅಶ್ವಥರೆಡ್ಡಿ, ವಿಜಯ ನರಸಿಂಹ, ಕೃಷ್ಣಪ್ಪ, ರಾಮಮೂರ್ತಿ, ಅಶೋಕ್, ಕುಮಾರ್, ಸುರೇಶ್ ಕುಮಾರ್, ಲಕ್ಷ್ಮಣ್ ರೆಡ್ಡಿ ಸೇರಿದಂತೆ ಇತರರು ಇದ್ದರು.

- ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಈ ಮೊದಲೇ ಕೇಳಿದ್ದೆ. ಆಗ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಒಂದು ವರ್ಷ ಕಾಯುವಂತೆ ಹೇಳಿದ್ದರು. ನಮ್ಮ ವರಿಷ್ಠರು ಕೊಟ್ಟ ಮಾತು ನಡೆಸಿಕೊಡುತ್ತಾರೆಂಬ ನಂಬಿಕೆ ಇದೆ.
ಕೆ.ವೈ.ನಂಜೇಗೌಡ ಶಾಸಕರು ಹಾಗೂ ಕೋಮುಲ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.