ಕೋಲಾರ: ತಾಲ್ಲೂಕಿನ ಗೂರ್ಜೇನಹಳ್ಳಿಯಲ್ಲಿ ತಿಂಗಳ ಹಿಂದೆ ಕಣ್ಮರೆಯಾಗಿದ್ದ ಸುಮಾರು ₹ 2.5 ಲಕ್ಷ ಬೆಲೆಯ ಕುರಿಗಳನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಕರ್ನಾಟಕ ಅಂಬೇಡ್ಕರ್ ಸ್ವಾಭಿಮಾನಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶಂಕರ್ ಅವರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ₹ 10 ಸಾವಿರ ನಗದು ನೀಡಿ ಸನ್ಮಾನಿಸಿದ್ದಾರೆ.
ಗೂರ್ಜೇನಹಳ್ಳಿ ಗ್ರಾಮದ ಅರಣ್ಯದ ಅಂಚಿನಲ್ಲಿ ಮೇಯುತ್ತಿದ್ದ ಕುರಿಗಳು ದಿಢೀರನೆ ಬೆದರಿ ಕಾಡಿನಲ್ಲಿ ಮರೆಯಾಗಿದ್ದವು. ಅವುಗಳನ್ನು ಹುಡುಕಿಕೊಡಲು ಗ್ರಾಮಾಂತರ ಠಾಣೆಯಲ್ಲಿ ರೈತ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಕುರಿಗಳನ್ನು ಹುಡುಕುವ ಕಾರ್ಯದಲ್ಲಿದ್ದಾಗ ಶಂಕರ್ ಪೊಲೀಸರಿಗೆ ಸಹಾಯಕ ಮಾಡಿದ್ದರು. ಕುರಿಗಳು ಪತ್ತೆಯಾದವು.
ಸಂಘಟನೆಯ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಸುಗಟೂರು ಕೃಷ್ಣಪ್ಪ, ವೆಂಕಟೇಶ್, ಬೈರಂಡಹಳ್ಳಿ ನಾರಾಯಣಸ್ವಾಮಿ, ಅಮೀರ್, ವೆಲಗಲಬುರ್ರೆ ಶ್ರೀನಿವಾಸ್, ನವೀನ್ ಮೇಡಿಹಾಳ, ಎಂ.ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.