ಕೆಜಿಎಫ್: ನಗರದ ಚಾಂಪಿಯನ್ ರೀಫ್ಸ್‌ನಲ್ಲಿರುವ ದೊಡ್ಡ ಹಳ್ಳದಲ್ಲಿ ಬಿದ್ದಿದ್ದ ಎಮ್ಮೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ರಕ್ಷಿಸಿದರು.
ಚಾಂಪಿಯನ್ ರೀಫ್ಸ್‌ನ ಎಂ.ಬ್ಲಾಕ್‌ನಲ್ಲಿ ಸುಮಾರು 15 ಅಡಿ ಆಳ ಇರುವ ಕಂದಕಕ್ಕೆ ಎಂಟು ವರ್ಷದ ಗರ್ಭಿಣಿ ಎಮ್ಮೆಯೊಂದು ಕಾಲು ಜಾರಿ ಬಿದ್ದಿತ್ತು. ಸ್ಥಳೀಯರು ಎಮ್ಮೆ ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಶ್ರಮಪಟ್ಟು ಕಿರಿದಾದ ಕಂದಕದಿಂದ ಎಮ್ಮೆ ರಕ್ಷಿಸುವಲ್ಲಿ ಸಫಲರಾದರು. ಅಗ್ನಿಶಾಮಕ ದಳದ ಸಿಬ್ಬಂದಿ ವಿಜಯಕುಮಾರ ಆಲೂರು, ಎ.ಎಂ.ಸತೀಶ್‌ಕುಮಾರ್, ಮಂಜುನಾಥ್ ನಿಡಗುಂದಿ, ಅಭಿನಂದನ್ ಖಾನಾಪುರ, ವರುಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.