
ಪ್ರಜಾವಾಣಿ ವಾರ್ತೆ
ಮಾಲೂರು: ತಾಲ್ಲೂಕಿನ ತೋರ್ನಹಳ್ಳಿ ಸಪ್ಲಾಂಬ ಹಾಗೂ ಭೀಮಲಿಂಗೇಶ್ವರ ರಾಸುಗಳ ಜಾತ್ರೆಯಲ್ಲಿ ರಾಸುಗಳ ಮೆರವಣಿಗೆಗೆ ಸೋಮವಾರ ಶಾಸಕ ಕೆ.ವೈ ನಂಜೇಗೌಡ ಚಾಲನೆ ನೀಡಿದರು.
ಕ್ಷೇತ್ರನಹಳ್ಳಿ ವೆಂಕಟೇಶ್ ಗೌಡ ತಮ್ಮ ರಾಸುಗಳನ್ನು ಜಾತ್ರೆಗೆ ಕರೆತಂದರು. ವಿವಿಧ ಕಲಾತಂಡ ಹಾಗೂ ಮಂಗಳವಾದ್ಯಗಳೊಂದಿಗೆ ರಾಸುಗಳ ಮೆರವಣಿಗೆ ನಡೆಯಿತು.
ಸಪ್ಲಾಂಬ ಜಾತ್ರೆಗೆ ಎತ್ತುಗಳನ್ನು ತಂದು ಪ್ರದರ್ಶಿಸಿ ವಿಶೇಷ ಪೂಜೆ ಸಲ್ಲಿಸಿ, ರಾಸುಗಳ ಮೆರವಣಿಗೆ ಮಾಡುವುದು ಪ್ರತೀತಿ ಎಂದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯನರಸಿಂಹ, ಗೀತಮ್ಮ ವೆಂಕಟೇಶ್ ಗೌಡ, ಲಿಂಗಾಪುರ ಕೃಷ್ಣಪ್ಪ, ಸುಶಾಂತ್ ಗೌಡ, ಬಿಆರ್ ಶ್ರೀನಿವಾಸ್, ತನ್ವೀರ್, ಗೋವರ್ಧನ್ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.