ADVERTISEMENT

ಮರು ಮದುವೆ: ಅವಕಾಶ ಕಲ್ಪಿಸದಿದ್ದರೆ ಕ್ರೂರ

​ಪ್ರಜಾವಾಣಿ ವಾರ್ತೆ
Published 26 ಮೇ 2019, 12:38 IST
Last Updated 26 ಮೇ 2019, 12:38 IST
ಕೋಲಾರದಲ್ಲಿ ಭಾರತ ಗೃಹಪ್ರವೇಶ ಸಮಿತಿ, ಅರಿವು ಮರು ವಿವಾಹ ವೇದಿಕೆ ಆಶ್ರಯದಲ್ಲಿ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನು ಗೃಹಪ್ರವೇಶ ಸಮಿತಿ ಅಧ್ಯಕ್ಷ ಪ್ರೊ.ಜಿ.ಶಿವಪ್ಪ ಅರಿವು ಉದ್ಘಾಟಿಸಿದರು.
ಕೋಲಾರದಲ್ಲಿ ಭಾರತ ಗೃಹಪ್ರವೇಶ ಸಮಿತಿ, ಅರಿವು ಮರು ವಿವಾಹ ವೇದಿಕೆ ಆಶ್ರಯದಲ್ಲಿ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನು ಗೃಹಪ್ರವೇಶ ಸಮಿತಿ ಅಧ್ಯಕ್ಷ ಪ್ರೊ.ಜಿ.ಶಿವಪ್ಪ ಅರಿವು ಉದ್ಘಾಟಿಸಿದರು.   

ಕೋಲಾರ: ‘ಚಿಕ್ಕವಯಸ್ಸಿನಲ್ಲೇ ಆಕಸ್ಮಿಕವಾಗಿ ಗಂಡನನ್ನು ಕಳೆದುಕೊಂಡಿರುವ ಮಹಿಳೆಗೆ ಮರು ಮದುವೆ ಮಾಡಿಕೊಳ್ಳುವ ಅವಕಾಶ ಕಲ್ಪಿಸದಿದ್ದರೆ ಅಸ್ಪಶ್ಯತೆಗಿಂತ ಕ್ರೂರ’ ಎಂದು ಭಾರತ ಗೃಹಪ್ರವೇಶ ಸಮಿತಿ ಅಧ್ಯಕ್ಷ ಪ್ರೊ.ಜಿ.ಶಿವಪ್ಪ ಅರಿವು ವಿಷಾದವ್ಯಕ್ತಪಡಿಸಿದರು.

‘ಭಾರತ ಗೃಹಪ್ರವೇಶ ಸಮಿತಿ, ಅರಿವು ಮರು ವಿವಾಹ ವೇದಿಕೆ ಆಶ್ರಯದಲ್ಲಿ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಆಕಸ್ಮಿಕ ಘಟಕಗಳಿಂದ ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಮಹಿಳೆ ಜೀವನವಿಡೀ ಒಂಟಿ ಜೀವನ ನಡೆಸುತ್ತಿದ್ದಾರೆ. ಅತಂಹವರಿಗೆ ಮರು ಮದುವೆ ಮಾಡುವ ಮೂಲಕ ಜೀವನ ರೂಪಿಸಿಕೊಳ್ಳುವ ಅಗತ್ಯವಿದೆ’ ಎಂದು ತಿಳಿಸಿದರು.

‘ಆಕಸ್ಮಿಕ ಘಟನೆಗಳಿಂದ ಸಣ್ಣ ಪ್ರಾಯದಲ್ಲೇ ಅನೇಕ ಮಂದಿ ಪತಿಯನ್ನು ಕಳೆದುಕೊಂಡಿದ್ದಾರೆ. ಸಂಪ್ರದಾಯದ ಕಟ್ಟುಪಾಡುಗಳಿಗೆ ಒಳಪಟ್ಟು ಒಂಟಿ ಬಾಳು ಅನುಭವಿಸುತ್ತಿರುವವರಿಗೆ ಹೊಸ ಬಾಳಿಗೆ ಮರು ವಿವಾಹ ವೇದಿಕೆ ಮಾಹಿತಿ ಒದಗಿಸುವ ಸಂರ್ಪಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ’ ಎಂದರು.

ADVERTISEMENT

‘ಪೋಷಕರು ಸಂಪ್ರದಾಯಕ್ಕೆ ಕಟ್ಟು ಬಿದ್ದು ಮರುಮದುವೆ ಮಾಡಲು ಹಿಂಜರಿಯುತ್ತಿದ್ದಾರೆ. ಇದರಿಂದ ಅತ್ತೆ ಮನೆಯಲ್ಲಿ ಗಮನಹರಿಸುವವರಿಲ್ಲದಂತಾಗಿದೆ. ಅಸ್ಪøಶ್ಯತೆಯಾದರೆ ಕೆಲವು ಸಮಾಜದವರಿಗೆ ಸೀಮಿತ. ಮರು ವಿವಾಹಕ್ಕೆ ಅವಕಾಶ ನೀಡದೆ ಇರುವುದು ಅಸ್ಪøಶ್ಯತೆಗಿಂತಲೂ ಕ್ರೂರವಾದುದು’ ಎಂದು ಹೇಳಿದರು.

‘6 ತಿಂಗಳ ಹಿಂದೆ ವಾಟ್ಸ್ ಅ್ಯಪ್ ಗ್ರೂಪ್ ಮಾಡಿದಾಗ ವ್ಯಾಪಕ ಸ್ಪಂದನೆ ವ್ಯಕ್ತವಾಗಿ ಬಂದ ಪ್ರಸ್ತಾವನೆ ನೋಡಿದಾಗ ಮರುಮದುವೆ ಆಗಬೇಕೆಂದು ಹೇಳಿಕೊಳ್ಳಲು ಸೂಕ್ತ ವೇದಿಕೆ ಇಲ್ಲವಲ್ಲ ಎಂದು ಅನಿಸಿತು. ಗ್ರಾಮೀಣ ಪ್ರದೇಶಕ್ಕಿಂತಲೂ ನಗರ ಪ್ರದೇಶದಿಂದಲೇ ಮರು ಮದುವೆಗೆ ಹೆಚ್ಚು ಪ್ರಸ್ತಾವನೆ ಬಂದಿತ್ತು’ ಎಂದು ವಿವರಿಸಿದರು.

‘ಈಗಾಗಲೇ ವಾಟ್ಸ್ ಅ್ಯಪ್ ಗ್ರೂಪ್‍ಗೆ ಬಂದ ಮಾಹಿತಿ ಆಧಾರದಲ್ಲಿ ವೇದಿಕೆ ಸೇತುವೆಯಾಗಿ ಕೆಲಸ ಮಾಡಿ ನಾಲ್ಕು ಮರುವಿವಾಹಗಳು ನಡೆದಿದೆ. ಮರು ವಿವಾಹ ವೇದಿಕೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕೋರಿದರು.

‘ಹಿಂದೆ ದಲಿತ ಸಂಘರ್ಷ ಸಮಿತಿಯೂ ಮರು ವಿವಾಹದ ಪ್ರಯತ್ನವನ್ನು ನಡೆಸಿತ್ತಾದರೂ ಚಳುವಳಿಯಾಗಿ ಬೆಳೆಸಲಿಲ್ಲ. ಹೀಗಾಗಿ ಮರುವಿವಾಹ ವೇದಿಕೆ ಈ ದಿಸೆಯಲ್ಲಿ ಸಣ್ಣ ಪ್ರಯತ್ನ ಆರಂಭಿಸಿದ್ದು, ಮುಂದೊಂದು ದಿನ ಚಳುವಳಿಯಾಗಿ ಮರುಮದುವೆಯ ವಾತಾವರಣ ಮೂಡಬಹುದು ಎಂಬ ಆಶಯ ನಮ್ಮದಾಗಿದೆ’ ಎಂದರು.

‘ಮರು ಮದುವೆಯಾಗಲು ಇಚ್ಚಿಸುವವರ ಹೆಸರು, ಭಾವಚಿತ್ರ, ಸ್ಥಳ, ಯಾವುದೂ ನಮಗೆ ಅವಶ್ಯಕತೆಯಿಲ್ಲ. ಸೇಹ್ನಿತರ, ಸಂಬಂಧಿಕರ ಮೊಬೈಲ್ ಸಂಖ್ಯೆ ನೀಡಿದರೆ ಸಾಕು, ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಹಿತಿ ನೀಡುವ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ತಿಳಿಸಿದರು.

ವೈದ್ಯ ಡಾ.ಕೆ.ಎಂ.ಜೆ.ಮೌನಿ ಮಾತನಾಡಿ, ‘ಮರು ವಿವಾಹ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಅದರೆ ಹಣಕಾಸು ವ್ಯವಹಾರ ಇಲ್ಲದೆ, ಮಧ್ಯವರ್ತಿಗಳಿಗೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ಶಿಕ್ಷಕ ನಾರಾಯಣಪ್ಪ, ವೇದಿಕೆಯ ಸದಸ್ಯರಾದ ರಾಧಾಮಣಿ, ದಲಿತ ಮುಖಂಡ ಟಿ. ವಿಜಯಕುಮಾರ್, ಮುಖಂಡರಾದ ಅಪ್ಪಿ ನಾರಾಯಣಸ್ವಾಮಿ, ನಾಗರಾಜ್, ವೆಂಕಟಾಚಲಪತಿ, ಎಚ್.ಶಾಂತ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.