ADVERTISEMENT

ಬಂಗಾರಪೇಟೆ: ಡಾ.ವಿಷ್ಣುವರ್ಧನ್ ಪ್ರತಿಮೆ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 2:47 IST
Last Updated 25 ಮಾರ್ಚ್ 2022, 2:47 IST
ಬಂಗಾರಪೇಟೆಯಲ್ಲಿ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಸ್ಥಾಪಿಸಿ ರಸ್ತೆಗೆ ಅವರ ಹೆಸರಿಡಬೇಕು ಎಂದು ಆಗ್ರಹಿಸಿ ಆತ್ಮವಿಶ್ವಾಸ ವೇದಿಕೆ ಸದಸ್ಯರು ಪುರಸಭೆ ಅಧ್ಯಕ್ಷೆ ಫರ್ಜಾನಾ ಸುಹೇಲ್ ಅವರಿಗೆ ಮನವಿ ಸಲ್ಲಿಸಿದರು
ಬಂಗಾರಪೇಟೆಯಲ್ಲಿ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಸ್ಥಾಪಿಸಿ ರಸ್ತೆಗೆ ಅವರ ಹೆಸರಿಡಬೇಕು ಎಂದು ಆಗ್ರಹಿಸಿ ಆತ್ಮವಿಶ್ವಾಸ ವೇದಿಕೆ ಸದಸ್ಯರು ಪುರಸಭೆ ಅಧ್ಯಕ್ಷೆ ಫರ್ಜಾನಾ ಸುಹೇಲ್ ಅವರಿಗೆ ಮನವಿ ಸಲ್ಲಿಸಿದರು   

ಬಂಗಾರಪೇಟೆ: ಪಟ್ಟಣದಲ್ಲಿ ಕನ್ನಡ ಚಲನಚಿತ್ರದ ಮೂಲಕ ನಾಡಿನ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿದ ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಸ್ಥಾಪಿಸಿ ಯಾವುದಾದರೂ ಒಂದು ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಆತ್ಮವಿಶ್ವಾಸ ವೇದಿಕೆ ಮತ್ತು ದಲಿತ ಶಕ್ತಿ ಸೇನೆ ಸದಸ್ಯರು, ಪುರಸಭೆ ಅಧ್ಯಕ್ಷೆ ಫರ್ಜಾನಾ ಸುಹೇಲ್ ಅವರಿಗೆ ಮನವಿ ಸಲ್ಲಿಸಿದರು.

ವಿಷ್ಣುವರ್ಧನ್ ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದಾರಷ್ಟೆ. ಆದರೆ, ಅವರ ಚಿತ್ರಗಳಲ್ಲಿ ಸಾಮಾಜಿಕ ಕಳಕಳಿ ಅಡಗಿದ್ದು, ಎಲ್ಲರಿಗೂ ಸ್ಫೂರ್ತಿಯಾಗಿದೆ. ಹಲವು ಚಿತ್ರಗಳ ಮೂಲಕ ನಮ್ಮ ನಾಡು, ನುಡಿ, ಸಂಸ್ಕೃತಿಯ ಕಂಪನ್ನು ಪಸರಿಸಿದ್ದಾರೆ ಎಂದರು.

‘ಕನ್ನಡ ಭಾಷೆ, ಸಾಹಿತ್ಯಕ್ಕೆ ವಿಷ್ಣು ಅವರ ಕೊಡುಗೆ ಅನನ್ಯ. ಅವರು ನಟಿಸಿರುವ ಹಲವು ಚಿತ್ರಗಳನ್ನು ಮರೆಯಲಾಗದು’ ಎಂದು ಆತ್ಮ ವಿಶ್ವಾಸ ವೇದಿಕೆ ಅಧ್ಯಕ್ಷ ಎಂ.ಎನ್. ಭಾರದ್ವಾಜ್ ಅಭಿಪ್ರಾಯಪಟ್ಟರು.

ADVERTISEMENT

ಆತ್ಮವಿಶ್ವಾಸ ವೇದಿಕೆ ಹಾಗೂ ದಲಿತ ಶಕ್ತಿ ಸೇನೆ ಮುಖಂಡರಾದ ಅಬಾಯ್ಯಪ್ಪ, ಮುದಾಸಿರ್, ಶಫೀಕ್ ಪಾಷ, ವಾಸಿಂ ಅಹ್ಮದ್ ಮುಜಾವರ್, ಚಂದ್ರು ಎಸ್. ಅಯ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.