ಕೆಜಿಎಫ್: ರಾಬರ್ಟಸನ್‌ಪೇಟೆ ನಗರಸಭೆಯ 11ನೇ ವಾರ್ಡ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷಿಣಿ ಜಯಗಳಿಸಿದ್ದಾರೆ.
ಹಿಂದಿನ ಸದಸ್ಯ ರಮೇಶ್ ನಿಧನವಾಗಿದ್ದರಿಂದ, ಖಾಲಿ ಇದ್ದ ಸ್ಥಾನಕ್ಕೆ ಡಿ. 27ರಂದು ಚುನಾವಣೆ ನಡೆದಿತ್ತು. ವಿಜೇತ ಅಭ್ಯರ್ಥಿ ಸುಭಾಷಿಣಿ ಅವರು 962 ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಜೆ. ಆನಂದರಾಜ್ 172 ಮತ, ಜ್ಯೋತಿಲಕ್ಷ್ಮಿ 5 ಮತ, ರಾಜೇಶ್ ಬಿ 273 ಮತ, ರೀಗನ್ 582 ಮತ ಹಾಗೂ ವಿಜಯಕುಮಾರ್ 105 ಮತ ಪಡೆದರು.
ನೋಟಾದಲ್ಲಿ 90 ಮತಗಳು ಚಲಾವಣೆಯಾಗಿದೆ. 2018 ಮತಗಳನ್ನು ಚಲಾಯಿಸಲಾಗಿತ್ತು. ಶೇ 64ರಷ್ಟು ಮತದಾನವಾಗಿತ್ತು. ಮತದಾರರು ಸಾಕಷ್ಟು ಆಸಕ್ತಿ ತೋರಿಸಿಲ್ಲ. ಮತಗಟ್ಟೆಗಳಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನು ಮಾಡಲಾಗಿತ್ತು. ಮುಂದಿನ ಚುನಾವಣೆಯಲ್ಲಿ ಹೆಚ್ಚು ಮತದಾರ ನಡೆಯುವ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.