ADVERTISEMENT

ಬೇತಮಂಗಲ | ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಒತ್ತು : ರೂಪಕಲಾ ಶಶಿಧರ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:51 IST
Last Updated 8 ಫೆಬ್ರುವರಿ 2026, 4:51 IST
ಬೇತಮಂಗಲ ಸಮೀಪದ ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾವಿಹೊಸಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ರೂಪಕಲಾ ಶಶಿಧರ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು 
ಬೇತಮಂಗಲ ಸಮೀಪದ ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾವಿಹೊಸಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ರೂಪಕಲಾ ಶಶಿಧರ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು    

ಬೇತಮಂಗಲ: ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು ₹4.50 ಕೋಟಿ ಅಂದಾಜು ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ರೂಪಕಲಾ ಶಶಿಧರ್ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ಗ್ರಾಮದ ಸಮೀಪದ ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಾವಿಹೊಸಹಳ್ಳಿ ರಸ್ತೆ, ವಿ.ಕೋಟೆ ರಸ್ತೆಯಿಂದ ಕೃಷ್ಣಾಪುರ-ಸುಂದರಪಾಳ್ಯಗೆ ₹1.50 ಕೋಟಿಯಲ್ಲಿ ಅಭಿವೃದ್ಧಿ ಹಾಗೂ ವಿ.ಕೋಟೆ ರಸ್ತೆಯಿಂದ ಶ್ರೀನಿವಾಸಪುರ, ತಾತೇಪಲ್ಲಿ, ಲಕ್ಷ್ಮೀಸಾಗರ, ಮುಷ್ಟೂರು, ವೆಂಗಸಂದ್ರ ಮಾರ್ಗವಾಗಿ ಆಂಧ್ರ ಗಡಿವರೆಗೆ ₹2.50 ಕೋಟಿ ಮತ್ತು ರಾಮಸಾಗರ ಗ್ರಾಮ ಪಂಚಾಯಿತಿ ವಡ್ರಹಳ್ಳಿ-ಮಹದೇವಪುರ ರಸ್ತೆಯನ್ನು ವಿ.ಕೋಟೆ ರಸ್ತೆಯಿಂದ ವಡ್ರಹಳ್ಳಿ ಮಹದೇವಪುರ ರಸ್ತೆಯವರೆಗೆ ₹50 ಲಕ್ಷದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, 2025-26ನೇ ಸಾಲಿನ ಮುಖ್ಯಮಂತ್ರಿ ₹50 ಕೋಟಿ ವಿಶೇಷ ಅನುದಾನದಲ್ಲಿ ಗ್ರಾಮೀಣ ಭಾಗದ ರಸ್ತೆಗಳಿಗಾಗಿಯೇ ₹7.50 ಕೋಟಿ ಮೀಸಲಿಡಲಾಗಿದೆ. ಮಳೆ ಹಾಗೂ ತಾಂತ್ರಿಕ ಕಾರಣಗಳಿಂದ ಅನುದಾನ ಬಿಡುಗಡೆ ವಿಳಂಬವಾಗಿತ್ತು. ಈಗ ಹಣ ಬಿಡುಗಡೆಯಾಗಿದೆ. ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಸಾಗರ ಚಂದ್ರಪ್ಪ, ಸುಂದರಪಾಳ್ಯ ಸುವರ್ಣ ವೆಂಕಟರಾಮ್, ಎನ್.ಜಿ ಹುಲ್ಕೂರು ಭವಾನಿ ಜಯಪಾಲ್, ಪಿಡಿಒ ಚಂದ್ರಕಲಾ, ಮಂಜುನಾಥ್, ಮುಖಂಡರಾದ ರಾಧಾಕೃಷ್ಣ ರೆಡ್ಡಿ, ಪದ್ಮನಾಭ ರೆಡ್ಡಿ, ಜಯರಾಮ್ ರೆಡ್ಡಿ, ಕೇಶವ ರೆಡ್ಡಿ, ಚಂದ್ರಕಾಂತ್, ನಾರಾಯಣಸ್ವಾಮಿ, ಯುವರಾಣಿ ವೆಂಕಟಾಚಲಪತಿ, ಕೃಷ್ಣಮೂರ್ತಿ, ಕೋದಂಡ ರೆಡ್ಡಿ, ಉಪಾಧ್ಯಕ್ಷ ಶೇಖ್ ಅಪ್ರೋಜ್, ನಾಗರಾಜ್ ಗೌಡ, ಮಧು, ಗುತ್ತಿಗೆದಾರ ಮುನಿರೆಡ್ಡಿ, ನವೀನ್ ರೆಡ್ಡಿ, ವೆಂಕಟೇಶ್, ಮುರಳಿ ಕೃಷ್ಣ, ಮುರಳಿ, ಬ್ಯಾಟಪ್ಪ, ನಾಗರಾಜ್ ರೆಡ್ಡಿ ಇತರರು.

​ಬೇತಮಂಗಲ: ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವ ದೃಷ್ಟಿಯಿಂದ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 4.50 ಕೋಟಿ ರೂಪಾಯಿ ಅಂದಾಜು ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ರೂಪಕಲಾ ಶಶಿಧರ್ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ಗ್ರಾಮದ ಸಮೀಪದ ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ​ಕಲಾವಿಹೊಸಹಳ್ಳಿ ರಸ್ತೆ ವಿ.ಕೋಟೆ ರಸ್ತೆಯಿಂದ ಕೃಷ್ಣಾಪುರ-ಸುಂದರಪಾಳ್ಯಗೆ 1.50 ಕೋಟಿಯಲ್ಲಿ ಅಭಿವೃದ್ಧಿ ಹಾಗೂ ವಿ.ಕೋಟೆ ರಸ್ತೆಯಿಂದ ಶ್ರೀನಿವಾಸಪುರ, ತಾತೇಪಲ್ಲಿ, ಲಕ್ಷ್ಮೀಸಾಗರ, ಮುಷ್ಟೂರು, ವೆಂಗಸಂದ್ರ ಮಾರ್ಗವಾಗಿ ಆಂಧ್ರ ಬಾರ್ಡರ್ ವರೆಗೆ 2.50 ಕೋಟಿ ಮತ್ತು ರಾಮಸಾಗರ ಗ್ರಾಮ ಪಂಚಾಯಿತಿಯ
​ವಡ್ರಹಳ್ಳಿ-ಮಹದೇವಪುರ ರಸ್ತೆಯನ್ನು ವಿ.ಕೋಟೆ ರಸ್ತೆಯಿಂದ ವಡ್ರಹಳ್ಳಿ ಮಹದೇವಪುರ ರಸ್ತೆಯವರೆಗೆ 50 ಲಕ್ಷದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.


​ಈ ವೇಳೆ ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, 2025-26ನೇ ಸಾಲಿನ ಮುಖ್ಯಮಂತ್ರಿಗಳ 50 ಕೋಟಿ ವಿಶೇಷ ಅನುದಾನದಲ್ಲಿ, ಗ್ರಾಮೀಣ ಭಾಗದ ರಸ್ತೆಗಳಿಗಾಗಿಯೇ 7.50 ಕೋಟಿ ಮೀಸಲಿಡಲಾಗಿದೆ. ಮಳೆ ಹಾಗೂ ತಾಂತ್ರಿಕ ಕಾರಣಗಳಿಂದ ಅನುದಾನ ಬಿಡುಗಡೆ ವಿಳಂಬವಾಗಿತ್ತು. ಈಗ ಹಣ ಬಿಡುಗಡೆಯಾಗಿದ್ದು, ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಿ ಶೀಘ್ರವಾಗಿ ಕೆಲಸ ಮುಗಿಸಲಾಗುವುದು ಎಂದು ತಿಳಿಸಿದರು.
​ರಸ್ತೆಗಳು ಹಾಳಾಗಿದ್ದರಿಂದ ವಿದ್ಯಾರ್ಥಿಗಳು, ರೈತರು ಮತ್ತು ಕಾರ್ಮಿಕರು ಅನುಭವಿಸುತ್ತಿದ್ದ ತೊಂದರೆ ನನ್ನ ಗಮನಕ್ಕೆ ಬಂದಿತ್ತು. ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

​ದೀರ್ಘಕಾಲದ ಬೇಡಿಕೆಯಾಗಿದ್ದ ಈ ರಸ್ತೆಗಳ ಅಭಿವೃದ್ಧಿಗೆ ಮುಂದಾದ ಶಾಸಕರಿಗೆ ಆಯಾ ಭಾಗದ ಮುಖಂಡರು ಹಾಗೂ ಗ್ರಾಮಸ್ಥರು ಹೂಗುಚ್ಛ ನೀಡಿ, ಸನ್ಮಾನಿಸಿ ಸ್ಥಳೀಯ ಮುಖಂಡರಾದ ಸುವರ್ಣಹಳ್ಳಿ ಕೃಷ್ಣ ಮೂರ್ತಿ ಹಾಗೂ ರಾಮಸಾಗರ ಚೆನ್ನಕೇಶವ ರೆಡ್ಡಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಸಾಗರ ಚಂದ್ರಪ್ಪ, ಸುಂದರಪಾಳ್ಯ ಸುವರ್ಣ ವೆಂಕಟರಾಮ್, ಎನ್ ಜಿ ಹುಲ್ಕೂರು ಭವಾನಿ ಜಯಪಾಲ್, ಪಿಡಿಒ ಚಂದ್ರಕಲಾ, ಮಂಜುನಾಥ್, ಮುಖಂಡರಾದ ರಾಧಾಕೃಷ್ಣ ರೆಡ್ಡಿ, ಪದ್ಮನಾಭ ರೆಡ್ಡಿ, ಜಯರಾಮ್ ರೆಡ್ಡಿ, ಕೇಶವ ರೆಡ್ಡಿ, ಚಂದ್ರ ಕಾಂತ್, ನಾರಾಯಣಸ್ವಾಮಿ, ಯುವರಾಣಿ ವೆಂಕಟಾಚಲಪತಿ, ಕೃಷ್ಣ ಮೂರ್ತಿ, ಕೋದಂಡ ರೆಡ್ಡಿ, ಉಪಾಧ್ಯಕ್ಷ ಶೇಖ್ ಅಪ್ರೋಜ್, ನಾಗರಾಜ್ ಗೌಡ, ಮಧು, ಗುತ್ತಿಗೆದಾರ ಮುನಿ ರೆಡ್ಡಿ, ನವೀನ್ ರೆಡ್ಡಿ, ವೆಂಕಟೇಶ್, ಮುರಳಿ ಕೃಷ್ಣ, ಮುರಳಿ, ಬ್ಯಾಟಪ್ಪ, ನಾಗರಾಜ್ ರೆಡ್ಡಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಚಿತ್ರ 01 ಬೇತಮಂಗಲ ಸಮೀಪದ ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾವಿಹೊಸಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ರೂಪಕಲಾ ಶಶಿಧರ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.