
ಟೇಕಲ್: ಕರ್ನಾಟಕ ಜನಸೇವಕ ಸಂಘದ ವತಿಯಿಂದ ಟೇಕಲ್‌ನಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ವೈ. ನಂಜೇಗೌಡ, ‘ಹಲವು ವರ್ಷಗಳಿಂದ ಕರ್ನಾಟಕ ಜನ ಸೇವಕ ಸಂಘವು ಕನ್ನಡ ಭಾಷೆ ನೆಲ ಜೊತೆಗೆ ಜನರ ಸೇವೆಗೆ ಹೆಚ್ಚಿನ ಅದ್ಯತೆ ನೀಡುತ್ತಿದೆ. ನಾಡು, ನುಡಿ ಮತ್ತು ಗಡಿಗಳ ರಕ್ಷಣೆಗೆ ಕನ್ನಡ ಪರ ಸಂಘಟನೆಗಳು ತೊಡಗಿಸಿಕೊಂಡಿವೆ’ ಎಂದು ಹೇಳಿದರು.
ಕರ್ನಾಟಕ ಜನಸೇವಕ ಸಂಘದ ಸಂಸ್ಥಾಪಕ ಹಾಗೂ ರಾಜ್ಯಾ ಘಟಕದ ಅಧ್ಯಕ್ಷ ಕೆ.ವಿ.ಆರ್. ಮಂಜುನಾಥಗೌಡ ಮಾತನಾಡಿ, ರಾಜ್ಯದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ನೀಡಬೇಕು ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಉಳ್ಳೇರಹಳ್ಳಿ ವೆಂಕಟೇಶ್, ಎಸ್. ಪ್ರಕಾಶ್, ಚಲಪತಿ ಗೌಡ, ಶ್ಯಾಮ, ಶಶಿಧರ, ಜಂಗಾನಹಳ್ಳಿ ಶ್ರೀನಿವಾಸ್, ಕೆಂಪಣ್ಣ, ರಾಜೇಶ್, ರಾಜೇಂದ್ರ, ಶ್ರೀಕಂಠಮೂರ್ತಿ, ಅಂಜನಿ ಸೋಮಣ್ಣ, ಎಚ್. ಹನುಮಂತಪ್ಪ, ಬಿ.ಜಿ. ಸತೀಶ್ ಬಾಬು, ಎಸ್.ಆರ್. ಯಲ್ಲಪ್ಪ, ಮುರುಗೇಶ್, ಪ್ರಗತಿ ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.