ADVERTISEMENT

ಗ್ರಾಮಾಂತರ ವಿಲ್ಸನ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:51 IST
Last Updated 11 ಡಿಸೆಂಬರ್ 2025, 6:51 IST
ಮಾಜಿ ಸಚಿವ ಆಲಂಗೂರು ಶ್ರೀನಿವಾಸ್ ಅವರ ಪುಣ್ಯ ತಿಥಿ ಅಂಗವಾಗಿ ನಡೆದ ಕ್ರಿಕೆಟ್ ಟೂರ್ನಿಮೆಂಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಗಣ್ಯರು ಬಹುಮಾನ ವಿತರಿಸಿದರು
ಮಾಜಿ ಸಚಿವ ಆಲಂಗೂರು ಶ್ರೀನಿವಾಸ್ ಅವರ ಪುಣ್ಯ ತಿಥಿ ಅಂಗವಾಗಿ ನಡೆದ ಕ್ರಿಕೆಟ್ ಟೂರ್ನಿಮೆಂಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಗಣ್ಯರು ಬಹುಮಾನ ವಿತರಿಸಿದರು   

ಮುಳಬಾಗಿಲು: ತಾಲ್ಲೂಕಿನ ಕೆ.ಬೈಯಪ್ಪನಹಳ್ಳಿ ಮುಖ್ಯ ರಸ್ತೆಯ ಚಲ್ಲಪಲ್ಲಿ ಗೇಟ್ ಬಳಿ ಅಖಿಲ ಕರ್ನಾಟಕ ಜನ ಸೇವಾ ಟ್ರಸ್ಟ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಮುಳಬಾಗಿಲು ಶಾಖೆ ವತಿಯಿಂದ ಬುಧವಾರ ಮಾಜಿ ಸಚಿವ ದಿ.ಆಲಂಗೂರು ಶ್ರೀನಿವಾಸ್ ಅವರ 14ನೇ ಪುಣ್ಯ ಸ್ಮರಣೆ ಅಂಗವಾಗಿ ಗ್ರಾಮಾಂತರ ವಿಲ್ಸನ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ನಡೆಯಿತು.

ಕಳೆದ ಮೂರು ದಿಮಗಳಿಂದ ನಡೆದ ಟೂರ್ನಿಮೆಂಟ್‌ನಲ್ಲಿ 23 ತಂಡಗಳು ಭಾಗವಹಿಸಿದ್ದವು. ತಾಯಲೂರು ಗಲ್ಲಿ ಕ್ರಿಕೆಟರ್ಸ್ ತಂಡ ಪ್ರಥಮ, ಪದಕಾಷ್ಟಿ ಎರಡನೇ ಸ್ಥಾನ, ಸಂಗೊಂಡಹಳ್ಳಿ ತಂಡ ಮೂರನೇ ಸ್ಥಾನ, ನಂಗಲಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿವೆ. ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.

ಈ ವೇಳೆ ಮಾಜಿ ಸಚಿವ ಎಚ್.ನಾಗೇಶ್ ಮಾತನಾಡಿ, ಮಾಜಿ ಸಚಿವ ದಿ.ಆಲಂಗೂರು ಶ್ರೀನಿವಾಸ್ ಅವರು ಸಚಿವರಾಗಿದ್ದಾಗ ತಾಲ್ಲೂಕಿನಲ್ಲಿ ನೂರಾರು ಶಾಶ್ವತ ಕಾಮಗಾರಿಗಳನ್ನು ನಡೆಸಿದ್ದಾರೆ. ಹಾಗಾಗಿ ಅವರನ್ನು ತಾಲ್ಲೂಕಿನ ಜನತೆ ಮರೆತಿಲ್ಲ ಎಂದು ತಿಳಿಸಿದರು.

ADVERTISEMENT

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರಾಜಕೀಯವಾಗಿ ಅವಕಾಶ ಸಿಕ್ಕಿದಾಗ ಬಳಸಿಕೊಳ್ಳಬೇಕು. ಹಾಗಾಗಿ ಆಲಂಗೂರ್ ಶ್ರೀನಿವಾಸ್ ನಿಧನಗೊಂಡು 14 ವರ್ಷ ಕಳೆದರೂ ಅವರ ಹೆಸರು ಇನ್ನೂ ಚಿರಸ್ಥಾಯಿಯಾಗಿ ನಿಂತಿದೆ ಎಂದರು.

ಮುಳಬಾಗಿಲಿನಲ್ಲಿ ಆಲಂಗೂರು ಶ್ರೀನಿವಾಸ್ ಪ್ರತಿಮೆಯನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿರುವುದು ನೋಡಿದರೆ ತುಂಬಾ ಬೇಜಾರಾಗುತ್ತದೆ. ಆದಷ್ಟು ಬೇಗ ಪ್ರತಿಮೆ ಲೋಕಾರ್ಪಣೆಗೊಳಿಸಬೇಕು ಎಂದರು.

ಶಾಸಕ ಸಮೃದ್ಧಿ ಮಂಜುನಾಥ್, ಕಾಡೇನಹಳ್ಳಿ ಕೆ.ಎನ್.ನಾಗರಾಜ್, ರಘುಪತಿ ರೆಡ್ಡಿ, ಎಂ.ಗೊಲ್ಲಹಳ್ಳಿ ಪ್ರಭಾಕರ್, ಆಲಂಗೂರು ಶಿವಶಂಕರ್, ಡಾ.ಭವಾನಿ, ಬಿ.ವಿ.ಸಾಮೇಗೌಡ, ಲಕ್ಷ್ಮಿ ನಾರಾಯಣ್, ಎನ್.ರಾಜಗೋಪಾಲ್, ಸೀಗೆಹಳ್ಳಿ ಸುಂದರ್, ಮೈಕ್ ಶಂಕರ್, ರಾಜು, ವರದಪ್ಪ, ವಾಣಿಗನಹಳ್ಳಿ ಬಾಲಕೃಷ್ಣ, ಮಿಟ್ಟಹಳ್ಳಿ ಪ್ರಕಾಶ್ ಗೌಡ, ಹರೀಶ್ ಗೌಡ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.