ಮುಳಬಾಗಿಲು: ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಯದಲ್ಲಿ ಅಲಂಕಾರಕ್ಕಾಗಿ ವಿದ್ಯುತ್ ಕಂಬಗಳಿಗೆ ಕಟ್ಟಲಾಗಿದ್ದ ಕನ್ನಡ ಬಾವುಟಗಳನ್ನು ನಗರಸಭೆಯ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.
ಇತ್ತೀಚೆಗೆ ನವೆಂಬರ್ ತಿಂಗಳಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪುನಿತೋತ್ಸವ ಎಂಬ ಕಾರ್ಯಕ್ರಮಗಳು ನಡೆದ ಸಮಯದಲ್ಲಿ ಆಯೋಜಕರು ನಗರದ ಮುಖ್ಯ ರಸ್ತೆಯಲ್ಲಿನ ವಿದ್ಯುತ್ ಕಂಬಗಳಿಗೆ ಕನ್ನಡದ ಬಾವುಟಗಳನ್ನು ಕಟ್ಟಿದ್ದರು. ಕಾರ್ಯಕ್ರಮ ಮುಗಿದು ನಾಲ್ಕೈದು ತಿಂಗಳು ಕಳೆದರೂ ಬಾವುಟಗಳನ್ನು ತೆರವು ಮಾಡದ ಕಾರಣ ಬಾವುಟಗಳು ಗಾಳಿಗೆ ಹರಿದು ನೇತಾಡುತ್ತಾ, ಬಿಸಿಲಿಗೆ ಒಣಗಿ, ವಾಹನಗಳ ಹೊಗೆಯಿಂದಾಗಿ ಬಣ್ಣಗಳನ್ನೇ ಕಳೆದುಕೊಂಡಿದ್ದವು. ಈ ಬಗ್ಗೆ ಮಾರ್ಚ್ 20ರ ಪ್ರಜಾವಾಣಿಯಲ್ಲಿ ‘ದೂಳು ಮೆತ್ತಿಕೊಂಡ ಕನ್ನಡ ಬಾವುಟ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಸುದ್ದಿಗೆ ಸ್ಪಂದಿಸಿದ ನಗರಸಭೆ ಅಧಿಕಾರಿಗಳು ಒಂದೇ ದಿನದಲ್ಲಿ ನಗರದ ನ್ಯಾಯಾಲಯಗಳಿಂದ ಕೋಲಾರ ರಸ್ತೆಯವರೆಗೂ ಇದ್ದ ಕನ್ನಡ ಬಾವುಟಗಳನ್ನು ಎರಡು ಜೆ.ಸಿ.ಬಿ ಯಂತ್ರಗಳ ಸಹಾಯದಿಂದ ತೆರವುಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.