ADVERTISEMENT

ಮುಳಬಾಗಿಲು: ಥಿನ್ನರ್ ಕುಡಿದು ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:47 IST
Last Updated 25 ಡಿಸೆಂಬರ್ 2025, 7:47 IST
ಝಾನ್ಸಿ
ಝಾನ್ಸಿ   

ಮುಳಬಾಗಿಲು: ಕುಡಿಯುವ ನೀರೆಂದು ತಿಳಿದು ಆಕಸ್ಮಿಕವಾಗಿ ಬಣ್ಣಗಳಲ್ಲಿ ಮಿಶ್ರಣ ಮಾಡುವ ಥಿನ್ನರ್ ಕುಡಿದು ಬಾಲಕಿ ಸಾವನ್ನಪ್ಪಿರುವ ಘಟನೆ ಮಂಗಳವಾರ ತಾಲ್ಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ.

ಪೂಜಾರಹಳ್ಳಿಯ ಝಾನ್ಸಿ (3) ಮೃತರು. ಝಾನ್ಸಿ ಮನೆಗೆ ಬಣ್ಣ ಬಳಿಯಲು ತಂದಿಟ್ಟಿದ್ದ ಥಿನ್ನರ್ ಅನ್ನು ನೀರೆಂದು ಕುಡಿದಿದ್ದಾಳೆ. ಇದರಿಂದ ಬಾಲಕಿ ಅಸ್ವಸ್ಥಳಾಗಿ ವಾಂತಿ ಮಾಡಿಕೊಂಡಿದ್ದಾಳೆ. ಕೂಡಲೇ ಬಾಲಕಿಯನ್ನು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೂ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT