
ಮುಳಬಾಗಿಲು: ಕೇಂದ್ರ ಸರ್ಕಾರದ ಈಗಿನ ಬಜೆಟ್ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿದ ‘ಗಿಮಿಕ್ ಬಜೆಟ್’ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಟೀಕಿಸಿದರು.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಿಂದ ಅಪಾರ ಜಿಎಸ್‌ಟಿ ಹಣ ಕೇಂದ್ರಕ್ಕೆ ಹರಿದರೂ, ಬಜೆಟ್ ಹಂಚಿಕೆಯಲ್ಲಿ ರಾಜ್ಯದೊಂದಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು. ದೇಶದಲ್ಲಿ ಆರ್ಥಿಕ ಸುಧಾರಣೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಅನುದಾನದಲ್ಲಿ ಕೊರತೆ ಇರುವುದು ಅನ್ಯಾಯ ಎಂದರು.
ಬಿಜೆಪಿ ಆಳುವ ರಾಜ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಕಾಂಗ್ರೆಸ್ ಆಳುವ ರಾಜ್ಯಗಳಿಗೆ ಮಲತಾಯಿ ಮನೋಭಾವ ತೋರಿಸಲಾಗುತ್ತಿದೆ ಎಂದು ಟೀಕಿಸಿದರು. ಇದರಿಂದ ಬಡವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ವರ್ಗಗಳ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿವರಿಸಿದರು.
ಮುಂದಿನ ರಾಜ್ಯ ಬಜೆಟ್ ಎಲ್ಲ ವರ್ಗ ಮತ್ತು ಜಾತಿ-ಮತದ ಜನರಿಗೆ ಪಕ್ಷಾತೀತವಾಗಿ ಪ್ರಯೋಜನ ತಲುಪಿಸುವಂತೆ ಇರಲಿದೆ ಎಂದು ತಿಳಿಸಿದರು.
ಜಯದೇವ್, ತೊರಡಿ ಶಿವಣ್ಣ, ಹರಿಪ್ರಸಾದ್, ಡಾ.ಚರಣ್ ರಾಜ್ ಸೇರಿದ ಹಲವು ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.