ADVERTISEMENT

ಉರ್ದು ಶಾಲೆ; ಕೊಠಡಿ ನಿರ್ಮಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 16:43 IST
Last Updated 24 ಡಿಸೆಂಬರ್ 2024, 16:43 IST
ಶ್ರೀನಿವಾಸಪುರ ಪಟ್ಟಣದ ಝಡ್.ಎಚ್.ಮೊಹಲ್ಲಾದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಎ.ಪಿ.ಜೆ ಅಬ್ದುಲ್ ಕಲಾಂ ವೆಲ್‌ಫೇರ್ ಟ್ರಸ್ಟ್‌ನಿಂದ ಗುರುತಿನ ಚೀಟಿ ಹಾಗೂ ವಿವಿಧ ಸಾಮಗ್ರಿ ವಿತರಿಸಲಾಯಿತು
ಶ್ರೀನಿವಾಸಪುರ ಪಟ್ಟಣದ ಝಡ್.ಎಚ್.ಮೊಹಲ್ಲಾದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಎ.ಪಿ.ಜೆ ಅಬ್ದುಲ್ ಕಲಾಂ ವೆಲ್‌ಫೇರ್ ಟ್ರಸ್ಟ್‌ನಿಂದ ಗುರುತಿನ ಚೀಟಿ ಹಾಗೂ ವಿವಿಧ ಸಾಮಗ್ರಿ ವಿತರಿಸಲಾಯಿತು    

ಶ್ರೀನಿವಾಸಪುರ: ಪಟ್ಟಣದ ಝಡ್.ಎಚ್.ಮೊಹಲ್ಲಾದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 175 ವಿದ್ಯಾರ್ಥಿಗಳಿದ್ದು, ಶಾಲಾ ಕೊಠಡಿಗಳ ಕೊರತೆ ಇದೆ. ಹೆಚ್ಚುವರಿ ಕೊಠಡಿಗೆ ಕ್ರಮ ವಹಿಸಬೇಕು ಎಂದು ಎ.ಪಿ.ಜೆ ಅಬ್ದುಲ್ ಕಲಾಂ ವೆಲ್‌ಫೇರ್ ಟ್ರಸ್ಟ್ ಒತ್ತಾಯಿಸಿದೆ.

ಟ್ರಸ್ಟ್‌ನ ಖಜಾಂಚಿ ಎ.ಟಿ.ಎಸ್.ರಿಜ್ವಾನ್ ಮಾತನಾಡಿ, ‘ಕೊಠಡಿಗಳನ್ನು ಸರ್ಕಾರದಿಂದ ನಿರ್ಮಿಸಿ ಕೊಡಲು ಶಾಲಾ ಶಿಕ್ಷಣ ಸಚಿವರಿಗೆ ಅಹವಾಲು ನೀಡಿದ್ದೇವೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಶಾಲಾ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಟ್ರಸ್ಟ್‌ನಿಂದ ಮಕ್ಕಳಿಗೆ ಗುರುತಿನ ಚೀಟಿ ಹಾಗೂ ಇನ್ನಿತರ ಸಾಮಗ್ರಿ ನೀಡಲಾಯಿತು.

ADVERTISEMENT

ಟ್ರಸ್ಟ್‌ ಅಧ್ಯಕ್ಷ ಅಬ್ದುಲ್ ಮುಜೀದ್ ಮಾತನಾಡಿ, ‘ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರಗತಿಯಯ್ಯ ಕೊಂಡೊಯ್ಯುವುದು ಶಿಕ್ಷಕರ ಜವಾಬ್ದಾರಿ. ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದ್ದು, ಕಂಪ್ಯೂಟರ್ ಹೇಳಿಕೊಡಲಾಗುತ್ತಿದೆ’ ಎಂದರು.

ಉಪಾಧ್ಯಕ್ಷ ಇಲಿಯಾಜ್ ಪಾಷ, ಸಂಘನಾ ಕಾರ್ಯದರ್ಶಿ ಇಂತಿಯಾಜ್, ಕಾರ್ಯದರ್ಶಿ ಅಕ್ರಂಪಾಷ, ಸದಸ್ಯರಾದ ಹಿದಾಯುತುಲ್ಲಾ ಖಾನ್, ಅಲ್ಲಾಬಕಷ್, ಎಸ್‌ಡಿಎಂಸಿ ಅಧ್ಯಕ್ಷ ಹಿದಾಯುತುಲ್ಲಾ ಖಾನ್, ಉಪಾಧ್ಯಕ್ಷ ಸಫೀನಾ, ಮುಖ್ಯ ಶಿಕ್ಷಕ ಮಹ್ಮದ್ ಸಾಧಿಕ್, ಶಿಕ್ಷಕರಾದ ರಿಹಾನಖಾನಮ್, ಅಸ್ಮಸುಲ್ತಾನ , ಭಾರತಮ್ಮ, ನುಸ್ರಕ್ ಅಮ್ಮಾಜಾನ್, ಗುಲ್ ಅಬ್ ಷ, ಕುಬ್ರಾಐಮನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.