ADVERTISEMENT

ಕೋವಿಡ್‌ ಸಂಕಷ್ಟ: ಶಿಕ್ಷಕರಿಗೆ ಹೆಚ್ಚಿದ ಸವಾಲು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 4:01 IST
Last Updated 19 ಫೆಬ್ರುವರಿ 2021, 4:01 IST
ಕೆಜಿಎಫ್ ಬೆಮಲ್‌ ನಗರದ ಸಂಭ್ರಮ್‌ ಕಾಲೇಜಿನಲ್ಲಿ ಬುಧವಾರ ನಡೆದ ಮುಖ್ಯಶಿಕ್ಷಕರ ಸಭೆಯಲ್ಲಿ ರುಪ್ಸ ಉಪಾಧ್ಯಕ್ಷ ಮುನಿಯಪ್ಪ ಮಾತನಾಡಿದರು
ಕೆಜಿಎಫ್ ಬೆಮಲ್‌ ನಗರದ ಸಂಭ್ರಮ್‌ ಕಾಲೇಜಿನಲ್ಲಿ ಬುಧವಾರ ನಡೆದ ಮುಖ್ಯಶಿಕ್ಷಕರ ಸಭೆಯಲ್ಲಿ ರುಪ್ಸ ಉಪಾಧ್ಯಕ್ಷ ಮುನಿಯಪ್ಪ ಮಾತನಾಡಿದರು   

ಕೆಜಿಎಫ್‌: ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಾಲೆಗಳು ಆರಂಭವಾಗುವ ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪುನಃ ಹಳೇ ದಾರಿಗೆ ಕರೆತರುವುದು ಶಿಕ್ಷಕರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳ ಸಂಘ(ರುಪ್ಸ)ದ ಉಪಾಧ್ಯಕ್ಷ ಮುನಿಯಪ್ಪ ಹೇಳಿದರು.

ಬೆಮಲ್‌ ನಗರದ ಸಂಭ್ರಮ್‌ ಕಾಲೇಜಿನಲ್ಲಿ ಬುಧವಾರ ನಡೆದ ಮುಖ್ಯ‌ಶಿಕ್ಷಕರ ಸಭೆಯಲ್ಲಿ ಮಾತನಾಡಿದರು.

ಸುಮಾರು ಹತ್ತು ತಿಂಗಳ ಕಾಲ ಮಕ್ಕಳು ಪ್ರಾಯೋಗಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರ ಮಾನಸಿಕ ಸ್ಥಿತಿ ಕೂಡ ಭಿನ್ನವಾಗಿರುತ್ತದೆ. ಬಹುತೇಕ ವಿದ್ಯಾರ್ಥಿಗಳು ಓದುವುದು ಮತ್ತು ಬರೆಯುವುದನ್ನೇ ಮರೆತಿರುವ ಸಂದರ್ಭಗಳೂ ಇವೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಹಳೆಯದನ್ನು ಜ್ಞಾಪಿಸಿ, ಹೊಸದನ್ನು ಮನನ ಮಾಡಿಸುವುದು ಶಿಕ್ಷಕರಿಗೆ ಸವಾಲಿನ ಕೆಲಸ. ಈ ದಿಸೆಯಲ್ಲಿ ಶಿಕ್ಷಕರನ್ನು ಹುರಿದುಂಬಿಸಿ, ಕೆಲಸ ತೆಗೆಯುವುದು ಮುಖ್ಯಶಿಕ್ಷಕರ ಕೆಲಸವಾಗಿದೆ ಎಂದು ಹೇಳಿದರು.

ADVERTISEMENT

ಕೋಲಾರ ಜಿಲ್ಲೆಯಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು ಉತ್ತಮ ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕ ಕಣ್ಣನ್‌, ಪ್ರಾಂಶುಪಾಲ ಶ್ರೀಕುಮಾರ್‌, ಮುಖಂಡರಾದ ಕಿರಣ್, ಆರಿಫ್‌, ಓಂಪ್ರಕಾಶ್‌, ಆಂಡ್ಯ್ಯೂಸ್‌, ಅರ್ಜುನನ್‌, ಎಡ್ವಿನ್‌ ನೇಸರಾಜ್‌, ಬಿ. ನಾಗೇಶ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.