ADVERTISEMENT

ಗುಣಮಟ್ಟ ಕಾಪಾಡಲು ಶಾಸಕ ಸೂಚನೆಕಂದಕೂರು; ಕಾಂಕ್ರೀಟ್ ರಸ್ತೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 6:40 IST
Last Updated 19 ಮಾರ್ಚ್ 2012, 6:40 IST
ಗುಣಮಟ್ಟ ಕಾಪಾಡಲು ಶಾಸಕ ಸೂಚನೆಕಂದಕೂರು; ಕಾಂಕ್ರೀಟ್ ರಸ್ತೆಗೆ ಚಾಲನೆ
ಗುಣಮಟ್ಟ ಕಾಪಾಡಲು ಶಾಸಕ ಸೂಚನೆಕಂದಕೂರು; ಕಾಂಕ್ರೀಟ್ ರಸ್ತೆಗೆ ಚಾಲನೆ   

ಕುಷ್ಟಗಿ: ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿನ ಹನುಮಂತ ದೇವರ ದೇವಸ್ಥಾನದ ಬಳಿ ನಿರ್ಮಿಸಲಾಗುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಲಾಯಿತು.ವಿಶೇಷ ಅನುದಾನದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಲಿರುವ ಸದರಿ ಕಾಮಗಾರಿಗೆ ಶಾಸಕ ಅಮರೇಗೌಡ ಬಯ್ಯಾಪುರ ಭೂಮಿಪೂಜೆ ನೆರವೇರಿಸಿದರು.
 
ಸರ್ಕಾರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು ಸಹಕಾರ ನೀಡುವ ಮೂಲಕ ತಮ್ಮ ಊರಿನ ಅಭಿವೃದ್ಧಿಗೆ ಜನ ಸಹಕರಿಸಬೇಕು. ಅಲ್ಲದೇ ಗುಣಮಟ್ಟದ ಕಾಮಗಾರಿ ನಡೆಯುವಂತೆ ನಿಗಾಗಬಹಿಸುವಂತೆ ಸಲಹೆ ನೀಡಿದ ಅವರು, ಕಳಪೆ ಕೆಲಸ ನಡೆಸದಂತೆ ನಿರ್ಮಿತಿ ಕೇಂದ್ರದ ಎಂಜಿನಿಯರ್‌ಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅನ್ನಪೂರ್ಣಮ್ಮ ಕಂದಕೂರಪ್ಪ ವಾಲ್ಮೀಕಿ, ನಿರ್ಮಿತಿ ಕೇಂದ್ರ ಎಂಜಿನಿಯರ್ ಆದೇಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಗುರನಗೌಡ ಪಾಟೀಲ, ಉಪಾಧ್ಯಕ್ಷ ನಿಂಗಪ್ಪ ಕುರ್ನಾಳ, ಜಿಲ್ಲಾ ಕಸಾಪ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಶರಣಪ್ಪ ಬಿಜಕಲ್, ಶರಣಪ್ಪ ಗೋಪಾಳಿ, ಪ್ರಮುಖರಾದ ಅಮರೇಶಪ್ಪ, ಬಾಪುಗೌಡ ಪಾಟೀಲ, ಚಂದ್ರಹಾಸ, ಗ್ರಾಮಪಂಚಾಯಿತಿ ಪ್ರತಿನಿಧಿಗಳು ಮತ್ತಿತರರು ಹಾಜರಿದ್ದರು.

ಅಲ್ಲದೇ ಗ್ರಾಮಕ್ಕೆ ಅಗತ್ಯವಾಗಿರುವ ಮೂಲ ಸೌಕರ್ಯಗಳು, ಸಂಪರ್ಕ ರಸ್ತೆ ಇತರೆ ಸೌಲಭ್ಯಗಳ ಬೇಡಿಕೆ ಕುರಿತು ಗ್ರಾಮಸ್ಥರು ಶಾಸಕ ಬಯ್ಯಾಪೂರ ಅವರೊಂದಿಗೆ ಚರ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.