ಕುಷ್ಟಗಿ: ಬದಲಾಗಿರುವ ರಾಜ್ಯ ಸರ್ಕಾರಿ ಕಚೇರಿ ವೇಳೆಗೆ ಸರಿಯಾಗಿ ಶಾಸಕರು ಇಲ್ಲಿಯ ಸಣ್ಣ ನೀರಾವರಿ ಕಚೇರಿಗೆ ಹೋದರೂ ಅಲ್ಲಿ ಅವರನ್ನು ಸ್ವಾಗತಿಸುವುದಕ್ಕೆ ಯಾರೊಬ್ಬ ನೌಕರರೂ ಇಲ್ಲದ ಪ್ರಸಂಗ ಸೋಮವಾರ ಬೆಳಿಗ್ಗೆ ನಡೆಯಿತು.
ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರ ಮುಂದೆ ಪ್ರಸ್ತಾಪಿಸಿದ ಬಯ್ಯಾಪುರ, 8.30ರ ಸಮಯದಲ್ಲಿ ಸಣ್ಣ ನೀರಾವರಿ ವಿಭಾಗ ಮತ್ತು ಉಪವಿಭಾಗದ ಕಚೇರಿಗೆ ಹೋದರೆ ಅಲ್ಲಿ `ಡಿ~ದರ್ಜೆ ನೌಕರರು ಸಹ ಇರಲಿಲ್ಲ, ಒಳಗಿನ ಎಲ್ಲ ಬಾಗಿಲುಗಳೂ ಇನ್ನೂ ಮುಚ್ಚಿದ್ದವು ಎಂದರು.
ಬರಗಾಲ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರು ಹಗಲು ರಾತ್ರಿಯನ್ನದೇ ಸೇವೆ ಸಲ್ಲಿಸಿದರೂ ಸಮಯ ಸಾಲದಿರುವಾಗ ಅಧಿಕಾರಿಗಳು, ನೌಕರರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ಪದ್ಧತಿ ಕೊನೆಗೊಳ್ಳಬೇಕು, ಇತರೆ ಶ್ರಮಜೀವಿಗಳಿಗಿಂತ ರಾಜ್ಯ ಸರ್ಕಾರಿ ನೌಕರರು ಪ್ರತ್ಯೇಕವೇನಲ್ಲ.
ಹಾಗಾಗಿ ಎಲ್ಲೆಡೆಯಂತೆ ಕಚೇರಿ ವೇಳೆಯನ್ನು ಇಲ್ಲಿಯೂ ಮುಂದುವರೆಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ಕಾರ್ಯದರ್ಶಿಯವರನ್ನು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.