ADVERTISEMENT

724 ವಿದ್ಯಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 8:24 IST
Last Updated 2 ಏಪ್ರಿಲ್ 2013, 8:24 IST

ಕೊಪ್ಪಳ: ಜಿಲ್ಲೆಯಲ್ಲಿ ಸೋಮವಾರ ಆರಂಭಗೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿತಿ 16,453 ವಿದ್ಯಾರ್ಥಿಗಳ ಪೈಕಿ 15,729 ವಿದ್ಯಾರ್ಥಿಗಳು ಹಾಜರಾಗಿದ್ದರು. 483 ಬಾಲಕರು ಹಾಗೂ 241 ಬಾಲಕಿಯರು ಸೇರಿದಂತೆ ಒಟ್ಟು 724 ವಿದ್ಯಾರ್ಥಿಗಳು ಗೈರುಹಾಜರಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಇಂದು ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಪರೀಕ್ಷೆ ನಡೆಯಿತು. ಪರೀಕ್ಷಾ ಅಕ್ರಮಗಳಿಗೆ ಸಂಬಂಧಪಟ್ಟಂತೆ ಯಾವ ವಿದ್ಯಾರ್ಥಿಗಳೂ ಡಿಬಾರ್ ಆಗಿಲ್ಲ ಎಂದು ಇವೇ ಮೂಲಗಳು ಸ್ಪಷ್ಟಪಡಿಸಿವೆ. ಕೊಪ್ಪಳ ತಾಲ್ಲೂಕಿನಲ್ಲಿ ಒಟ್ಟು ನೋಂದಾಯಿತ 5,159 ವಿದ್ಯಾರ್ಥಿಗಳಲ್ಲಿ 4,905 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

170 ಬಾಲಕರು ಹಾಗೂ 64 ಬಾಲಕಿಯರು ಗೈರು ಹಾಜರಾಗಿದ್ದರು. ಗಂಗಾವತಿ ತಾಲ್ಲೂಕಿನಲ್ಲಿ 5,328 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 5,108 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 151 ಬಾಲಕರು ಹಾಗೂ 69 ಬಾಲಕಿಯರು ಸೇರಿದಂತೆ ಒಟ್ಟು 220 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಿದ್ದರು ಎಂದು ಇವೇ ಮೂಲಗಳು ತಿಳಿಸಿವೆ.

ಕುಷ್ಟಗಿ ತಾಲ್ಲೂಕಿನಲ್ಲಿ ಒಟ್ಟು ನೋಂದಾಯಿತ 2,807 ವಿದ್ಯಾರ್ಥಿಗಳ ಪೈಕಿ 2,683 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 81 ಬಾಲಕರು ಹಾಗೂ 43 ಬಾಲಕಿಯರು ಸೇರಿದಂತೆ ಒಟ್ಟು124 ವಿದ್ಯಾರ್ಥಿಗಳು ಗೈರು ಇದ್ದರು. ಯಲಬುರ್ಗಾ ತಾಲ್ಲೂಕಿನಲ್ಲಿ ನೋಂದಾಯಿತ 3,159 ವಿದ್ಯಾರ್ಥಿಗಳ ಪೈಕಿ 3,033 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

81 ಬಾಲಕರು ಹಾಗೂ 45 ಬಾಲಕಿಯರು ಸೇರಿದಂತೆ ಒಟ್ಟು 126 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.