
ಗಂಗಾವತಿ: ‘ಹುಟ್ಟು ಮತ್ತು ಸಾವು, ಅದರ ನಡುವಿನ ಬದುಕು, ಯಾವುದೂ ನಮ್ಮ ಕೈಯಲ್ಲಿಲ್ಲ. ಭೂಮಿಗೆ ಬರಬೇಕಾದರೆ ಅರ್ಜಿ ಸಲ್ಲಿಸಿ ಇಂಥವರ ಮನೆಯಲ್ಲೆ ಹುಟ್ಟಬೇಕೆಂದು ತೀರ್ಮಾನಿಸುವುದಿಲ್ಲ. ಯಾವೋದು ಒಂದು ಶಕ್ತಿ ನಮ್ಮನ್ನು ಭೂಮಿಗೆ ಕಳುಹಿಸಿದೆ’ ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರ ಶಷ್ಠಿಪೂರ್ತಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಯಾರು ಶಾಶ್ವತವಾಗಿ ಭೂಮಿ ಮೇಲಿರಲು ಸಾಧ್ಯವಿಲ್ಲ. ಜಾತ್ರೆ ಮಾಡಿ ಹೋಗಲು ಬಂದಿದ್ದೇವೆ. ಈ ಜೀವನದಲ್ಲಿ ವೈವಾಹಿಕ ವ್ಯವಸ್ಥೆ ಅದ್ಭುತ ಸಂಬಂಧ’ ಎಂದರು.
ಎಚ್.ಆರ್ ಶ್ರೀನಾಥ ಮಾತನಾಡಿ, ‘ನನ್ನ ಶಷ್ಠಿಪೂರ್ತಿ ಅಭಿನಂದನಾ ಸಮಾರಂಭಕ್ಕೆ ಸರ್ವ ಜನಾಂಗದವರು ಆಗಮಿಸಿ ಅಭಿನಂದಿಸಿ ಹಾರೈಸಿದ್ದು ಖುಷಿನೀಡಿದೆ. ಕ್ಷೇತ್ರದ ಜನರ ಪ್ರೀತಿಗೆ ಸದಾ ಅಭಾರಿ’ ಎಂದರು.
ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಶ್ರೀರಾಮುಲು, ಮಾಜಿ ಶಾಸಕರಾದ ಜಿ.ವೀರಪ್ಪ, ಪರಣ್ಣ ಮುನವಳ್ಳಿ, ಕಲ್ಮಠದ ಕೊಟ್ಟೂರೇಶ್ವರ ಸ್ವಾಮೀಜಿ ಸೇರಿದಂತೆ ಸರ್ವ ಜನಾಂಗದ ಸಮುದಾಯದವ ಪ್ರಮುಖರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.