ಕನಕಗಿರಿ: ಶ್ರೀ ಸಾಯಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತ ನಾಟಿ ಮಾಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಶನಿವಾರ ನಡೆಯಿತು.
ಭತ್ತದ ಗದ್ದೆಯ ಕೆಸರಿನಲ್ಲಿ ಇಳಿದ ವಿದ್ಯಾರ್ಥಿಗಳು ಸ್ವಂತ ತಾವೆ ಭತ್ತದ ಸಸಿ ನಾಟಿ ಮಾಡಿ ಖುಷಿ ಪಟ್ಟರು.
ಜಡೇಶ ಅವರು ಭತ್ತ ಬೆಳೆಯುವ ವಿಧಾನ, ಪೈರುಗಳಿಗೆ ನೀರು ಹರಿಸುವುದು, ಔಷಧಿ ಸಿಂಪರಣೆ, ಫೈರು ಸಂರಕ್ಷಣೆ, ಕಟಾವು ಮಾಡುವುದು, ಭತ್ತ ಒಣಗಿಸುವುದು ಇತರೆ ವಿಷಯಗಳ ಕುರಿತು ಮಾಹಿತಿ ನೀಡಿದರು.
ಮುಖ್ಯಶಿಕ್ಷಕ ಹರೀಶ ನಾಯಕ ಮಾತನಾಡಿ ವಿದ್ಯಾರ್ಥಿಗಳಿಗೆ ಬರೀ ಪಠ್ಯ ಮಾತ್ರವಲ್ಲದೆ ಕೃಷಿ ಚಟುವಟಿಕೆಗಳು, ವ್ಯಾಪಾರ ವಹಿವಾಟು ಸೇರಿದಂತೆ ಹೊರ ಜಗತ್ತಿನಲ್ಲಿ ನಡೆಯುವ ಘಟನಾವಳಿಗಳ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಭತ್ತದ ಬೆಳೆ ನಾಟಿಯ ಪ್ರಾತ್ಯಕ್ಷಿಕೆ ಬಗ್ಗೆ ತಿಳಿಸಲಾಗಿದೆ ಎಂದರು.
ಕೃಷಿ ದೇಶದ ಬೆನ್ನೆಲುಬು, ಕೃಷಿಕರು ತಮ್ಮ ಹೊಲ, ಗದ್ದೆಯ ಮಣ್ಣು ಪರೀಕ್ಷಿಸಿ ಕೃಷಿ ವಿಜ್ಞಾನಿಗಳ ಮಾರ್ಗ ದರ್ಶನ ಪಡೆದು ಬಿತ್ತನೆ ಮಾಡಬೇಕು ಎಂದು ತಿಳಿಸಿದರು. ಮಳೆ ಆಶ್ರಿತ ಹಾಗೂ ಒಣಭೂಮಿ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ಕುರಿತು ಈ ಸಮಯದಲ್ಲಿ ಮಾಹಿತಿ ನೀಡಲಾಯಿತು.
ಶಿಕ್ಷಕರಾದ ಸವಿತಾ ನಾಯ್ಕ, ಮಂಜುನಾಥ ಮಿಟ್ಲಕೋಡ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.