ADVERTISEMENT

ಕಾರ್ಮಿಕ ಸಂಹಿತೆ ವಿರೋಧಿಸಿ ಎಐಸಿಸಿಟಿಯುಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 16:06 IST
Last Updated 9 ಆಗಸ್ಟ್ 2024, 16:06 IST
ಗಂಗಾವತಿಯ ಕೃಷ್ಣ ದೇವರಾಯ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಎಂಎಲ್) ಲಿಬರೇಷನ್, ಸಿಪಿಎಂ(ಎಂಎಲ್) ಲಿಬರೇಷನ್ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು
ಗಂಗಾವತಿಯ ಕೃಷ್ಣ ದೇವರಾಯ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಎಂಎಲ್) ಲಿಬರೇಷನ್, ಸಿಪಿಎಂ(ಎಂಎಲ್) ಲಿಬರೇಷನ್ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು    

ಗಂಗಾವತಿ: ದೇಶದಲ್ಲಿ ಜಾರಿಯಾಗುತ್ತಿರುವ ಕಾರ್ಮಿಕ ಸಂಹಿತೆ, ಖಾಸಗಿಕರಣ, ಹೊಸ ಅಪರಾಧ ಕಾನೂನುಗಳನ್ನ ವಿರೋಧಿಸಿ ಶುಕ್ರವಾರ ನಗರದ ಕೃಷ್ಣದೇವರಾಯ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಎಂಎಲ್) ಲಿಬರೇಷನ್, ಸಿಪಿಎಂ(ಎಂಎಲ್) ಲಿಬರೇಷನ್ ಪಕ್ಷದ ಸದಸ್ಯರು ಅಖಿಲ ಭಾರತ ಆಂದೋಲನ ಅಭಿಯಾನದ ಮೂಲಕ ಪ್ರತಿಭಟನೆ ನಡೆಸಿದರು.

ಹೋರಾಟಗಾರ ಭಾರದ್ವಾಜ್ ಮಾತನಾಡಿ, ‘ಕಾರ್ಮಿಕರು ತಮ್ಮ ಕಾನೂನುಗಳನ್ನು ಹಲವು ಹೋರಾಟಗಳನ್ನು ನಡೆಸಿ ಪಡೆದಿದ್ದು, ಕಾರ್ಮಿಕರ ಹಿತ ಕಾಪಾಡಬೇಕಾದ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುತ್ತಿರುವುದು ಖಂಡನೀಯ. ಜಾರಿ ಮಾಡುತ್ತಿರುವ ಹೊಸ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಸಿಪಿಐಎಂಎಲ್ ಲಿಬರೇಷನ್ ಪಕ್ಷ ಜಿಲ್ಲಾ ಕಾರ್ಯದರ್ಶಿ ವಿಜಯ ದೊರೆರಾಜು ಮಾತನಾಡಿ, ‌‘ಕಾರ್ಮಿಕ ವಿರೋಧಿ ಮತ್ತು ಹೊಸ ಅಪರಾಧ ಕಾನೂನು ಜಾರಿಗೆ ತರುವ ಮೂಲಕ ದೇಶದಲ್ಲಿ ಕೇಂದ್ರ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ತರುತ್ತಿದ್ದು, ಕಾರ್ಮಿಕರೆಲ್ಲರೂ ಜಾಗೃತರಾಗಿ ಈ ಕಾನೂನುಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕು’ ಎಂದು ಮಾಹಿತಿ ನೀಡಿದರು.

ADVERTISEMENT

ಎಐಸಿಸಿಟಿಯು ಸಂಘಟನೆ ಜಿಲ್ಲಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ, ಪರುಶುರಾಮ, ಬಾಬರ, ಗಿಡ್ಡಪ್ಪ, ಜಿಲೇಬಿಗೌಸ, ಹನುಮಂತ ಮಲ್ಲಾಪುರ, ಹುಸೇನ ಗೋವಾ, ಮಾಯಮ್ಮ, ಪಾರ್ವತಮ್ಮ, ಇಂದ್ರಮ್ಮ, ಹನುಮಂತಪ್ಪ, ಭಿಮಣ್ಣ, ನಾಗರಾಜ, ಹುಚ್ಚಪ್ಪ, ಆಲಂಸಾಬ, ಆನಂದ ಸೇರಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.