ADVERTISEMENT

ಪರಿಷ್ಕೃತ ಪಠ್ಯ: ವಾಪಸ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:32 IST
Last Updated 10 ಜೂನ್ 2022, 19:32 IST

ಕೊಪ್ಪಳ: ‘ಸರ್ಕಾರದ ಆದೇಶವಿಲ್ಲದೆ ಕಾನೂನು ಬಾಹಿರವಾಗಿ ರಚಿಸಿದ ಮರುಪರಿಷ್ಕೃತ ಪಠ್ಯಗಳನ್ನು ಹಿಂಪ ಡೆಯಬೇಕು’ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಆಗ್ರಹಿಸಿದ್ದಾರೆ.

‘ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಯು ಸರ್ಕಾರದ ಆದೇಶವಿಲ್ಲದೆ ಕಾರ್ಯನಿರ್ವಹಿಸಿರುವುದು ಅನೈತಿಕ ಮತ್ತು ಅನ್ಯಾಯದ ಕ್ರಮ. ಪ್ರಜಾತಂತ್ರದ ನೀತಿ, ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡಿದೆ. ಆದ್ದರಿಂದ ಈ ಕೂಡಲೇ ಈ ಮರು ಪರಿಷ್ಕೃತ ಪಠ್ಯಗಳನ್ನು ಹಿಂಪಡೆಯಬೇಕು’ ಎಂದು ಅಲ್ಲಮಪ್ರಭು ಒತ್ತಾಯಿಸಿದ್ದಾರೆ.

‘ಬೆಂಗಳೂರಿನಲ್ಲಿ ನಡೆದ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಮಟ್ಟದ ಪಠ್ಯಪುಸ್ತಕ ತಿರುಚುವಿಕೆ ವಿರುದ್ಧದ ಸಭೆಯಲ್ಲಿ ನಾಡಿನ ಕವಿಗಳು, ಲೇಖಕರು, ಚಿಂತಕರು ಮತ್ತು ಶಿಕ್ಷಣ ತಜ್ಞರು ಈ ವಿಷಯವನ್ನು ದಾಖಲೆಗಳ ಸಮೇತ ಪ್ರಸ್ತಾಪಿಸಿದ್ದರು. ಐತಿಹಾಸಿಕ ಸತ್ಯಗಳನ್ನು ತಿರುಚಿರುವ ಸಮಿತಿಯ ಪರಿಷ್ಕರಣೆಯನ್ನು ಒಕ್ಕೊರ ಲಿನಿಂದ ವಿರೋಧಿಸಿದ್ದರು’ ಎಂದು ಬೆಟ್ಟದೂರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.