ADVERTISEMENT

ಕಷ್ಟಗಳನ್ನು ಮೆಟ್ಟಿನಿಂತ ‘ಮಹಾನಾಯಕ’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 11:53 IST
Last Updated 14 ಏಪ್ರಿಲ್ 2021, 11:53 IST
ಮುನಿರಾಬಾದ್‌ನ ಇಂದಿರಾ ವೃತ್ತದಲ್ಲಿ ಬುಧವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು
ಮುನಿರಾಬಾದ್‌ನ ಇಂದಿರಾ ವೃತ್ತದಲ್ಲಿ ಬುಧವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು   

ಮುನಿರಾಬಾದ್: ಇಲ್ಲಿನ ಇಂದಿರಾ ವೃತ್ತದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಗ್ರಾಮದ ಮುಖಂಡ ವೈ.ರಾಮುಡು ಮಾತನಾಡಿ,‘ಬಾಬಾ ಸಾಹೇಬರು ಅನೇಕ ಕಷ್ಟಗಳನ್ನು ಅನುಭವಿಸಿದರು. ಅವುಗಳನ್ನು ಮೆಟ್ಟಿ ನಿಂತು ರಾಷ್ಟ್ರ ನಾಯಕರಾದರು’ ಎಂದರು.

ಎಚ್.ಎಸ್.ಹೊನ್ನುಂಚಿ ಮಾತನಾಡಿ,‘ಬಾಬಾ ಸಾಹೇಬರು ನೀಡಿದ ಮೂರು ಮಂತ್ರಗಳ ಅರ್ಥ ತಿಳಿದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಾಗ ಮಾತ್ರ ಸಂವಿಧಾನದ ಆಶಯ ಈಡೇರಿಸಿದಂತಾಗುತ್ತದೆ’ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಾ ಇಸ್ರೇಲ್, ಗಣ್ಯರಾದ ಭರಮಪ್ಪ ಬೆಲ್ಲದ, ರಾಜು, ಇಕ್ಬಾಲ್ ಹುಸೇನ್, ಫಜುಲು ರೆಹಮಾನ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಇದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಆಟೋ ಚಾಲಕರ ಸಂಘದ ವತಿಯಿಂದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಆನಂದರಾಜ್ ಕುಟ್ಟಿ, ಉಪಾಧ್ಯಕ್ಷ ದೇವರಾಜ್ ಮತ್ತು ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.