ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಹಣ ಶುಕ್ರವಾರ ಎಣಿಕೆ ಮಾಡಲಾಯಿತು.
ಹುಂಡಿ ಹಣ ಎಣಿಕೆ ಕಾರ್ಯವು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶರಾವ ಅವರ ನೇತೃತ್ವದಲ್ಲಿ ನಡೆದಿದ್ದು, ಅದರಲ್ಲಿ ₹10,04,930 (ಮಾ.7ರಿಂದ ಮಾ.28ರವರೆಗೆ) ಹಣ ಸಂಗ್ರಹವಾಗಿದೆ. ಇನ್ನೂ ಕಳೆದ ಬಾರಿ (ಮಾ.7)ರಂದು ಹುಂಡಿ ಎಣಿಕೆ ವೇಳೆಯಲ್ಲಿ ₹28.35,647 ಸಂಗ್ರಹವಾಗಿತ್ತು. ಹುಂಡಿ ಎಣಿಕೆ ಕಾರ್ಯವು ಸಂಪೂರ್ಣ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಿತು.
ಸಾಣಾಪುರ ಗ್ರಾಮದ ಕೆಜಿಬಿ ಬ್ಯಾಂಕ್ ಮ್ಯಾನೇಜರ್‌ನ ವೀನಕುಮಾರ, ಗ್ರಾಮೀಣ ಠಾಣೆ ಎಎಸ್ಐ ಸೇರಿದಂತೆ ದೇವಸ್ಥಾನ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.