ADVERTISEMENT

ಅಂಜನಾದ್ರಿ: ದರ್ಶನ ಸಮಯ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 15:42 IST
Last Updated 23 ಸೆಪ್ಟೆಂಬರ್ 2022, 15:42 IST
   

ಗಂಗಾವತಿ (ಕೊಪ್ಪಳ): ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಐತಿಹಾಸಿಕ ಧಾರ್ಮಿಕ ಪುಣ್ಯಕ್ಷೇತ್ರ ಅಂಜನಾದ್ರಿ ಬೆಟ್ಟದ ದೇವರ ದರ್ಶನ ಸಮಯವನ್ನ ಬೆಳಿಗ್ಗೆ 7ರಿಂದ ಸಂಜೆ 5.30ವರೆಗೆ ನಿಗದಿಪಡಿಸಿ ಆಂಜನೇಯ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಯು‌.ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಅಂಜನಾದ್ರಿ ದೇವಸ್ಥಾನ ಅರಣ್ಯ ಪ್ರದೇಶದಲ್ಲಿದ್ದು, ಇಲ್ಲಿನ ಚಿರತೆ, ಕರಡಿ ಸೇರಿ ಇತರೆ ವನ್ಯಜೀವಿಗಳು ನಿವಾಸ ಮಾಡುತ್ತಿವೆ. ಈಚೆಗೆ ಬೆಟ್ಟದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿ, ದೇವಸ್ಥಾನ ಕಚೇರಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಹಿತದೃಷ್ಟಿಯಿಂದ ಆಂಜನೇಯ ದೇವರ ದರ್ಶನ ಸಮಯವನ್ನ ಬೆಳಿಗ್ಗೆ 8 ರಿಂದ 3ಕ್ಕೆ ನಿಗದಿಪಡಿಸಿ, ಕಚೇರಿ ಬಳಿ ಬೋನ್ ಅಳವಡಿಸಲಾಗಿತ್ತು. ಇದೀಗ ಯಾವ ಪ್ರಾಣಿ ಸೆರೆಯಾಗದ ಕಾರಣ ದೇವಸ್ಥಾನ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.