ADVERTISEMENT

ಕೊಪ್ಪಳ | ಬಸವ ಜಯಂತಿ: ಎತ್ತುಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಮೇ 2022, 13:11 IST
Last Updated 3 ಮೇ 2022, 13:11 IST
ಅಳವಂಡಿ ಸಮೀಪದ ನಿಲೋಗಿಪುರ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಎತ್ತುಗಳ ಮೆರವಣಿಗೆ ನಡೆಯಿತು
ಅಳವಂಡಿ ಸಮೀಪದ ನಿಲೋಗಿಪುರ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಎತ್ತುಗಳ ಮೆರವಣಿಗೆ ನಡೆಯಿತು   

ಅಳವಂಡಿ: ಸಮೀಪದ ನಿಲೋಗಿಪುರ ಗ್ರಾಮದಲ್ಲಿ ಅಭಿವೃದ್ಧಿ ಮಂಡಳಿ ವತಿಯಿಂದ ಬಸವ ಜಯಂತಿ ಆಚರಿಸಲಾಯಿತು.

ಜಯಂತಿ ಅಂಗವಾಗಿ ಎತ್ತುಗಳ ಮೆರವಣಿಗೆ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿದ ಮೆರವಣಿಗೆ ಮಾರುತೇಶ್ವರ ದೇವಸ್ಥಾನ ತಲುಪಿತು. ನೀರಲಗಿ ತಂಡದವರು ನಂದಿಕೋಲು ನೃತ್ಯ ಪ್ರದರ್ಶಿಸಿದರು. ನಂತರ ಅನ್ನಸಂತರ್ಪಣೆ ಮಾಡಲಾಯಿತು.

ಪ್ರಮುಖರಾದ ಆನಂದರಡ್ಡಿ ರಡ್ಡೇರ, ಅಂದಪ್ಪ ಮಂಡಲಗೇರಿ, ಪರಮೇಶ್ವರಪ್ಪ ಹೀರೇಮಠ, ಕ್ರೀಷ್ಣಪ್ಪ ಚೌಟಗಿ, ಹನುಮಪ್ಪ ಕೇಸಲಾಪುರ, ಶಿವಪ್ಪ ಗಾಣಿಗೇರ, ರಾಮಣ್ಣ ನಿಂಗಾಪೂರ, ಕ್ರಿಷ್ಣಪ್ಪ ರಡ್ಡೇರ , ಹನುಮೇಶ ಬಾಲಣ್ಣವರು, ಮಂಜುನಾಥ ಮಾಡಗೇರಿ, ಪ್ರಶಾಂತ ರಡ್ಡೇರ, ತಿಮ್ಮಾರೆಡ್ಡಿ ರಡ್ಡೇರ, ರವಿ ಮಾಡಗೇರಿ, ಮಂಜುನಾಥ ನಿಂಗಾಪುರ, ಶರಣಪ್ಪ ಹೂಗಾರ, ಲಕ್ಷಣ ನಿಂಗಾಪುರ, ದೇವೇಂದ್ರ ಹೊಸಮನಿ, ಶರಣಪ್ಪ ಪೂಜಾರ, ಹನುಮಗೌಡ ಗೌಡ್ರ ಹಾಗೂ ಬಸವರಾಜ ರಡ್ಡೇರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.