ಗಂಗಾವತಿ: ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಬಸವೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು.
ಕಡೆಯ ಸೋಮವಾರದ ಅಂಗವಾಗಿ ಬೆಳಿಗ್ಗೆ ಬಸವಣ್ಣನ ಮೂರ್ತಿಗೆ ಮಹಾರುದ್ರಾಭಿಷೇಕ, ಪೂಜೆ ಸೇರಿ ವಿಶೇಷ ಪೂಜಾ ಧಾರ್ಮಿಕ ನೆರವೇರಿದವು. ನಂತರ ಕಳಸದ ಮೆರವಣಿಗೆ ಜೊತೆಗೆ ಗಂಗಾಪೂಜೆ ಮೆರವಣಿಗೆ ನಡೆಯಿತು.
ಜಾತ್ರಾ ನಿಮಿತ್ತ ಒಂದು ಸಾಮೂಹಿಕ ವಿವಾಹ ಹಾಗೂ ಮಹಾ ಪ್ರಸಾದ ನೆರವೇರಿತು. ಸಂಜೆ ವಡ್ಡರಹಟ್ಟಿ ಗ್ರಾಮದ ಸಂಗಮೇಶ್ವರ ಕ್ಯಾಂಪ್‌ನಿಂದ ಹಳೆ ಗ್ರಾಮ ಪಂಚಾಯಿತಿವರೆಗೆ ಬಸವಣ್ಣ ದೇವರ ಉಚ್ಚಾಯ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.
ಬಸವೇಶ್ವರ ದೇವಸ್ಥಾನ ಸಮಿತಿಯ ಕನಕಪ್ಪ ಸಿರವಾರ ನಾಯಕ, ಹುಲುಗಪ್ಪ ನಾಯಕ, ಶರಣಪ್ಪ ಹುಲಸಗೇರಿ, ಆದೇಶ ದೋಟಿಹಾಳ, ಹನುಮೇಶ ಬಳ್ಳಾರಿ, ದೂಳಪ್ಪ ತಾಳಕೇರಿ, ಮಂಜುನಾಥ ಹುಲಸನಹಟ್ಟಿ, ಹನುಮಂತ ಭೋವಿ, ಇಮಾಮ್, ರಮೇಶ ಹುಲಸನಹಟ್ಟಿ, ಯಮನಪ್ಪ, ಮುಖಂಡರಾದ ಮೇರಾಜ್ ದಳಪತಿ, ಸಾಂಗ್ಲಿ ಯಮನೂರ, ಮುರ್ತುಜಾಸಾಬ್ ಹಿರೇಮನಿ, ಶಿವರಾಜ ಡಂಬರ್, ಖಾಸೀಂಸಾಬ್, ಅಮರೇಶ, ಶರಣಪ್ಪ ಗೊರ್ಜಿನಾಳ, ಮದರ್ ಸಾಬ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.