ADVERTISEMENT

ಯಲಬುರ್ಗಾ: ಗಾಂಧಿಗ್ರಾಮ ಪುರಸ್ಕಾರ ಅರ್ಹತಾ ಪಟ್ಟಿಯಲ್ಲಿ ‘ಬೇವೂರ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 5:58 IST
Last Updated 25 ನವೆಂಬರ್ 2025, 5:58 IST
ಯಲಬುರ್ಗಾ ತಾಲ್ಲೂಕು ಬೇವೂರು ಗ್ರಾಮ ಪಂಚಾಯಿತಿಗೆ ಕೊಪ್ಪಳ ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಹಾಗೂ ಇತರರು ಭೇಡಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದರು
ಯಲಬುರ್ಗಾ ತಾಲ್ಲೂಕು ಬೇವೂರು ಗ್ರಾಮ ಪಂಚಾಯಿತಿಗೆ ಕೊಪ್ಪಳ ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಹಾಗೂ ಇತರರು ಭೇಡಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದರು   

ಯಲಬುರ್ಗಾ: ತಾಲ್ಲೂಕಿನ ಬೇವೂರು ಗ್ರಾಮ ಪಂಚಾಯಿತಿ ಕಚೇರಿಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ.ಟಿ ಅವರು ಭೇಟಿ ನೀಡಿ 2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರದ ವಿವಿಧ ದಾಖಲಾತಿಗಳನ್ನು ಪರಿಶೀಲಿಸಿದರು.

ಯಲಬುರ್ಗಾ ತಾಲ್ಲೂಕಿನ ಬೇವೂರ, ಚಿಕ್ಕಮ್ಯಾಗೇರಿ, ಮುಧೋಳ ಗ್ರಾಮ ಪಂಚಾಯತಿಗಳು 2024-25ನೇ ಗಾಂಧಿ ಗ್ರಾಮ ಪುರಸ್ಕಾರದ ಅರ್ಹತಾ ಪಟ್ಟಿಯಲ್ಲಿರುವುದರಿಂದ ಅದಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲಿಸಿ ಪರಾಮರ್ಶೆಗೆ ಒಳಪಡಿಸಿದರು.

ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ಸ್ವಚ್ಛತೆ, ಕರವಸೂಲಾತಿ, ಎಸ್‌ಬಿಎಂ, ಜೆಜೆಎಂ, ಸಮುದಾಯ ಶೌಚಾಲಯ, ಸೋಲಾರ್ ವ್ಯವಸ್ಥೆ, ವಿಂಡ್ ಫ್ಯಾನ್ ಮೊಬೈಲ್ ತೆರಿಗೆ ಸೇರಿದಂತೆ ಅಗತ್ಯ ಮಾಹಿತಿ ಪರಿಶೀಲಸಿದರು.

ADVERTISEMENT

ಜಿ.ಪಂ ವಸತಿ ಅಧೀಕ್ಷಕ ಹುಸೇನಸಾಬ್, ಗ್ರಾಪಂ ಪಿಡಿಒ ಅಬ್ದುಲ್ ಗಫಾರ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.