ADVERTISEMENT

ಗ್ರಾನೈಟ್‌ ಹೊಂಡಕ್ಕೆ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 1:19 IST
Last Updated 7 ನವೆಂಬರ್ 2020, 1:19 IST
ಬಿಸನಾಳ ಬಳಿ ಹೊಂಡದಲ್ಲಿ ಬಾಲಕನ ಶವ ಹೊರತೆಗೆಯಲು ಅಗ್ನಿಶಾಮಕ ಠಾಣೆ ಸಿಬ್ಬಂದಿ ಶ್ರಮಿಸಿದರು
ಬಿಸನಾಳ ಬಳಿ ಹೊಂಡದಲ್ಲಿ ಬಾಲಕನ ಶವ ಹೊರತೆಗೆಯಲು ಅಗ್ನಿಶಾಮಕ ಠಾಣೆ ಸಿಬ್ಬಂದಿ ಶ್ರಮಿಸಿದರು   

ಕುಷ್ಟಗಿ: ಗ್ರಾನೈಟ್‌ ಕಲ್ಲು ತೆಗೆದ ಗುಂಡಿಯಲ್ಲಿದ್ದ ನೀರಿನಲ್ಲಿ ಮುಳುಗಿ ಬಾಲಕ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬಿಸನಾಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಮಂಜುನಾಥ ಶರಣಪ್ಪ ಒದೆಗೋಳ (9) ಮೃತ ಬಾಲಕ.

ಗ್ರಾಮದ ಬಳಿ ಅನಧಿಕೃ ಗ್ರಾನೈಟ್ ಗಣಿಗಾರಿಕೆ ನಡೆದಿದ್ದು ಇತ್ತೀಚಿನ ಮಳೆಯಿಂದ ಗುಂಡಿಯಲ್ಲಿ ನೀರು ತುಂಬಿತ್ತು. ಬಾಲಕ ಆಕಸ್ಮಿಕವಾಗಿ ಬಿದ್ದಿದ್ದಾನೆ. ನಂತರ ಸ್ಥಳಕ್ಕೆ ಆಗಮಿಸಿದ ಪಟ್ಟಣದ ಅಗ್ನಿಶಾಮಕ ಠಾಣೆ ಅಧಿಕಾರಿ ರಾಜು ನರಸಪ್ಪ ಮತ್ತು ಸಿಬ್ಬಂದಿ ಬಾಲಕನ ಶವವನ್ನು
ಹೊರತೆಗೆದರು.

ADVERTISEMENT

ಬಾಗಲಕೋಟೆ ಜಿಲ್ಲೆ ಇಳಕಲ್‌ ಪಟ್ಟಣದ ಹನುಮಂತಮ್ಮ ಪೊಲೀಸ್ ಪಾಟೀಲ ಎಂಬುವವರು ತಮ್ಮ ಜಮೀನಿನಲ್ಲಿ ಗ್ರಾನೈಟ್‌ ಗಣಿಗಾರಿಕೆ ನಡೆಸಿ ನಂತರ ಗುಂಡಿಯನ್ನು ಮುಚ್ಚಿಲ್ಲ ಅಥವಾ ಅದರ ಸುತ್ತಲೂ ರಕ್ಷಣೆಗೆ ಬೇಲಿ ಹಾಕಿಲ್ಲ. ಅವರ ನಿರ್ಲಕ್ಷ್ಯದಿಂದ ತಮ್ಮ ಮಗ ಮೃತಪಟ್ಟಿದ್ದು ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಮೃತ ಬಾಲಕನ ತಾಯಿ ಹುಲಿಗೆಮ್ಮ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಅದರ ಅನ್ವಯ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪ್ರಭಾರ ಸಬ್‌ ಇನ್‌ಸ್ಪೆಕ್ಟರ್‌ ವೀರಪ್ಪ ನಾಯಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.