ADVERTISEMENT

ಬಂಡಿಹರ್ಲಾಪುರ: 280 ಜನರಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 4:48 IST
Last Updated 23 ಜೂನ್ 2021, 4:48 IST
ಮುನಿರಾಬಾದ್ ಸಮೀಪದ ಬಂಡಿಹರ್ಲಾಪುರ ಆರೋಗ್ಯ ಉಪ ಕೇಂದ್ರದಲ್ಲಿ ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ನೀಡಲಾಯಿತು
ಮುನಿರಾಬಾದ್ ಸಮೀಪದ ಬಂಡಿಹರ್ಲಾಪುರ ಆರೋಗ್ಯ ಉಪ ಕೇಂದ್ರದಲ್ಲಿ ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ನೀಡಲಾಯಿತು   

ಬಂಡಿಹರ್ಲಾಪುರ (ಮುನಿರಾಬಾದ್): ಸಮೀಪದ ಬಂಡಿಹರ್ಲಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ಕೋವಿಡ್ ಲಸಿಕಾ ಅಭಿಯಾನದಲ್ಲಿ 280 ಜನ ಲಸಿಕೆ ಪಡೆದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆರೋಗ್ಯ ಉಪ ಕೇಂದ್ರದಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಗ್ರಾಮದ ಮುಖಂಡ ಕಾಶಯ್ಯ ಸ್ವಾಮಿ ಮಾತನಾಡಿ,‘ರೋಗ ಬಂದ ಮೇಲೆ ನರಳುವುದಕ್ಕಿಂತ ಮುಂಚಿತವಾಗಿ ಲಸಿಕೆ ಪಡೆದು ರೋಗನಿರೋಧಕ ಶಕ್ತಿ ಪಡೆದುಕೊಳ್ಳಬೇಕು’ ಎಂದರು.

ADVERTISEMENT

ಉಪ ತಹಶೀಲ್ದಾರ್ ರೇಖಾ ದೀಕ್ಷಿತ್ ಮಾತನಾಡಿ,‘ಕೋವಿಡ್ ಮಣಿಸಲು ಸದ್ಯ ಲಸಿಕೆಯೊಂದೇ ಪರಿಹಾರ’ ಎಂದು ಮನವಿ ಮಾಡಿದರು. ಗ್ರಾ.ಪಂ. ಅಧ್ಯಕ್ಷ ಚನ್ನಕೃಷ್ಣ ಮಾತನಾಡಿದರು. ವೈದ್ಯಾಧಿಕಾರಿಗಳಾದ ಡಾ.ಮಾಧುರಿ, ಡಾ.ಮಂಜುಳಾ ಶರ್ಮಾ, ಕಂದಾಯ ನಿರೀಕ್ಷಕ ಬಸವರಾಜ ಬನ್ನಿಕೊಪ್ಪ, ಪಿಡಿಒ ಮಂಜುಳಾ ಪಾಟೀಲ್, ಗ್ರಾಮ ಲೆಕ್ಕಾಧಿಕಾರಿ ಲಲಿತಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.