ADVERTISEMENT

ಕುಕನೂರು: ಬಸ್‌ ಸಂಚಾರಕ್ಕೆ ಬಸವರಾಜ ರಾಯರಡ್ಡಿ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 15:36 IST
Last Updated 7 ಮೇ 2025, 15:36 IST
ಕುಕನೂರಿನ ಬಸ್ ನಿಲ್ದಾಣದಲ್ಲಿ ಬಸ್‌ ಸಂಚಾರಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು
ಕುಕನೂರಿನ ಬಸ್ ನಿಲ್ದಾಣದಲ್ಲಿ ಬಸ್‌ ಸಂಚಾರಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು   

ಕುಕನೂರು: ‘ಯಲಬುರ್ಗಾ ಹಾಗೂ ಕುಕನೂರು ಸೇರಿದಂತೆ ವಿವಿಧ ಮಾರ್ಗಗಳಿಗೆ ನೂತನವಾಗಿ 20 ಹೊಸ ಬಸ್‌ ಮಂಜೂರು ಮಾಡಿಸುತ್ತೇನೆ’ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಭರವಸೆ ನೀಡಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಕನೂರು–ಕಾಗಿನೆಲೆ, ಯಲಬುರ್ಗಾ–ಬೀದರ್ ಹಾಗೂ ಕುಕನೂರು–ಧರ್ಮಸ್ಥಳ ಮಾರ್ಗದಲ್ಲಿ ಸಂಚರಿಸಲಿರುವ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕುಕನೂರು ಹಾಗೂ ಯಲಬುರ್ಗಾ ತಾಲ್ಲೂಕಿನ ಯಾವ ಗ್ರಾಮಗಳಿಗೆ ಬಸ್ ಅಭಾವ ಇದೆಯೋ ಆ ಮಾರ್ಗಗಳಲ್ಲಿ ಬಸ್ ಓಡಿಸಬೇಕು ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು. ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅನುದಾನ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಸಂಸದ ರಾಜಶೇಖರ್ ಹಿಟ್ನಾಳ್, ಪ.ಪಂ. ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ, ರಾಮಣ್ಣ ಬಂಕದಮನಿ, ಸಿರಾಜ್ ಕರಮುಡಿ, ನೂರುದ್ದೀನ್‌ಸಾಬ್‌ ಗುಡಿಹಿಂದಲ್, ಗಗನ ನೋಟಗಾರ, ನಾರಾಯಣಪ್ಪ ಹರಪನಳ್ಳಿ, ಹನುಮಂತಗೌಡ ಚಂಡೂರು, ಕೆರಿಬಸಪ್ಪ ನಿಡಗುಂದಿ, ಸಿದ್ದಯ್ಯ ಕಳ್ಳಿಮಠ, ಮಂಜುನಾಥ ಕಡೆಮನಿ, ಶಿವನಗೌಡ ದಾನರಡ್ಡಿ, ಸಂಗಮೇಶ ಗುತ್ತಿ ಹಾಗೂ ರಾಘವೇಂದ್ರ ಕಾತರಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.