ADVERTISEMENT

ಆನ್‌ಲೈನ್ ವಂಚನೆ ಜಾಗೃತಿ ಅವಶ್ಯ: ಪೊಲೀಸ್ ಅಧಿಕಾರಿ ಸೋಮಶೇಖರ

ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 14 ಮೇ 2019, 14:19 IST
Last Updated 14 ಮೇ 2019, 14:19 IST
 ಸೋಮಶೇಖರ ಜುಟ್ಟಲ್‌
 ಸೋಮಶೇಖರ ಜುಟ್ಟಲ್‌   

ಕೊಪ್ಪಳ: ಸೈಬರ್ ಮತ್ತು ಆರ್ಥಿಕ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಅತ್ಯಂತ ಅವಶ್ಯ ಎಂದು ಸೈಬರ್, ಅರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಇನ್‌ಸ್ಪೆಕ್ಟರ್‌ ಸೋಮಶೇಖರ ಜುಟ್ಟಲ್‌ ಹೇಳಿದರು.

ನಗರದಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ವತಿಯಿಂದ ಸೈಬರ್ ಮತ್ತು ಆರ್ಥಿಕ ಅಪರಾಧಗಳ ಕುರಿತು ಬ್ಯಾಂಕ್ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬ್ಯಾಂಕ್‌ ಅಧಿಕಾರಿಗಳ ಹೆಸರಿನಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್‌ ಬಳಸಿ ಎಟಿಎಂವಿತ್‌ ಡ್ರಾ, ಒಟಿಪಿ ಪಡೆದು ಕಳ್ಳತನ ಮಾಡುವಂತಹ ವಂಚನೆ ಪ್ರಕರಣ ಜರುಗುತ್ತಿವೆ. ಬ್ಯಾಂಕುಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇಂತಹ ಯಾವುದೇ ಮಾಹಿತಿಯನ್ನು ಕೇಳುವುದಿಲ್ಲ. ಈ ಬಗ್ಗೆ ಎಲ್ಲರಿಗೂ ತಿಳಿವಳಿಕೆ ಇದ್ದರೂ, ಸಹ ಈ ರೀತಿಯ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ADVERTISEMENT

ಆನ್‌ಲೈನ್ ಶಾಪಿಂಗ್ ವಂಚನೆ, ಆನ್‌ಲೈನ್ ಸಾಲ, ಒಎಲ್‌ಎಕ್ಸ್‌ನಲ್ಲಿ ವಾಹನ ಮಾರಾಟ, ದೊಡ್ಡ ಮೊತ್ತದ ಹಣ ಹಾಗೂ ಕಾರುಗಳ ಬಹುಮಾನಗಳ ಆಮಿಷ ಇವುಗಳಿಗೆ ಜನರು ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.

ಎಲ್ಲ ದಾಖಲೆ ನೀಡಿಲೋನ್ ಕೇಳಿದರೆ ಬ್ಯಾಂಕುಗಳೇಕೊಡುವುದು ಕಷ್ಟ. ಅಂತಹದರಲ್ಲಿ ಆನ್‌ಲೈನ್ ಮೂಲಕ ನೀವು ಇಷ್ಟು ಮೊತ್ತದ ಸಾಲಕ್ಕೆ ಆಯ್ಕೆಯಾಗಿದ್ದಿರಿ. ಸ್ಪರ್ಧೆಯೇ ಇಲ್ಲದೇ ನೀವು ಇಷ್ಟು ಮೊತ್ತ ಮೊಬೈಲ್, ಬೈಕ್, ಕಾರು ಗೆದ್ದಿದ್ದಿರಿ ಎಂದು ನಿಮ್ಮ ಸಂಖ್ಯೆಗಳಿಗೆ ಕರೆ ಬರುವುದೆಲ್ಲವೂ ಸುಳ್ಳು. ಇಂತಹ ಕರೆಗಳು ಬಂದರೆ ಅದಕ್ಕೆ ಸ್ಪಂದಿಸದಿರಿ ಎಂದು ಸಲಹೆ ನೀಡಿದರು.

ನಿಮ್ಮ ಖಾತೆ ಸಂಖ್ಯೆ, ಪಿನ್, ಒಟಿಪಿಗಳಂತಹ ಯಾವುದೇ ಸಂಖ್ಯೆಗಳನ್ನು ಬ್ಯಾಂಕ್ ಕೇಳುವುದಿಲ್ಲ. ಅಲ್ಲದೇ ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದರು.

ಸಿಬ್ಬಂದಿರಂಗನಾಥ ಸೇರಿದಂತೆ ವಿವಿಧ ಬ್ಯಾಂಕ್ಹಾಗೂ ವಿವಿಧ ಪೊಲೀಸ್ ಅಧಿಕಾರಿ, ಸಿಬ್ಬಂದಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.