ಕೊಪ್ಪಳ: ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೆ ಅಂಗವಾಗಿ ರಥೋತ್ಸವ ಮುಗಿದು ಎರಡು ದಿನಗಳು ಕಳೆದಿದ್ದು, ಈಗ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ರಥೋತ್ಸವದ ದಿನ ಹಾಗೂ ಅದರ ಮರುದಿನ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದಿದ್ದರು. ವಾರಾಂತ್ಯವಾದ ಶನಿವಾರ ಜನರ ಸಂಖ್ಯೆ ಕಡಿಮೆಯಾಗಿತ್ತು. ವಿದ್ಯುತ್ ದೀಪಗಳ ಅಲಂಕಾರದಿಂದ ದೇವಸ್ಥಾನ ಹಾಗೂ ಸುತ್ತಮುತ್ತಲಿನ ವಾತಾವರಣ ಕಂಗೊಳಿಸುತ್ತಿದ್ದು, ಅಗ್ನಿಯಲ್ಲಿ ನಡೆಯುವುದು ಹಾಗೂ ಪಾಯಸ ತಯಾರಿಕೆಯ ಸಂಪ್ರದಾಯ ಪಾಲನೆ ನಡೆದವು.
ದ್ವಾದಶಿ ದಿನವಾದ ಶನಿವಾರ ಬೆಳಗಿನ ಜಾವ ಅಗ್ನಿಕುಂಡ ಹಾಯಲಾಯಿತು. ಎರಡು ದಿನಗಳ ಹಿಂದೆ ಕೊಂಡದ ಪೂಜಾ, ಗಂಗಾದೇವಿ ಪೂಜಾ, ದೇವಿಗೆ ಪ್ರಸಾದ ಕೇಳುವುದು, ಬಾಳಿದಿಂಡಿಗೆ ಆರೋಹಣ ಹೀಗೆ ಅನೇಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.