ADVERTISEMENT

ಕುಕನೂರು: ಶಾಲೆಗಳಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 12:31 IST
Last Updated 23 ಆಗಸ್ಟ್ 2021, 12:31 IST
ಕುಕನೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಿಎಸ್ಐ ವೆಂಕಟೇಶ್.ಎನ್ ಹೂ ನೀಡಿ ಮಕ್ಕಳನ್ನು ಸ್ವಾಗತಿಸಿದರು
ಕುಕನೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಿಎಸ್ಐ ವೆಂಕಟೇಶ್.ಎನ್ ಹೂ ನೀಡಿ ಮಕ್ಕಳನ್ನು ಸ್ವಾಗತಿಸಿದರು   

ಕುಕನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಸಡಗರದಿಂದ ನಡೆಯಿತು.

ಪಟ್ಟಣದ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ಪಿಎಸ್ಐ ವೆಂಕಟೇಶ್.ಎನ್ ಅವರು ಹೂ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.

ಶಾಲೆಗಳನ್ನು ತಳಿರು–ತೋರಣಗಳಿಂದ ಶೃಂಗರಿಸಲಾಗಿತ್ತು.

ADVERTISEMENT

‘ಮಿಂಚಿನ ಸಂಚಾರ’ ಹೆಸರಿನ ತಂಡಗಳು ಶಾಲೆಗಳ ಸ್ವಚ್ಛತೆ, ಕುಡಿವ ನೀರಿನ ವ್ಯವಸ್ಥೆ, ಶೌಚಾಲಯ, ಆಟದ ಮೈದಾನ, ಬಿಸಿಯೂಟದ ಕುರಿತು ಗಮನಹರಿಸಿ ಸಲಹೆ ನೀಡಿದವು.

ಆಡೋಣ ಬಾ...ಕಲಿಯೋಣ ಬಾ ಎಂದು ಮಕ್ಕಳು ಘೋಷಣೆ ಕೂಗಿದರು. ಶಾಲೆಗಳಿಗೆ ವಾಪಸ್‌ ಆದ ಚಿಣ್ಣರಿಗೆ ಭರ್ಜರಿ ಸ್ವಾಗತ ದೊರೆಯಿತು.

ತಳಿರು, ತೋರಣಗಳಿಂದ ಶೃಂಗರಿಸಿದ ಶಾಲೆ ಕಂಡ ಮಕ್ಕಳ ಮುಖ ಅರಳಿತು. ಬಿಸಿಯೂಟದಲ್ಲಿ ಹೋಳಿಗೆ, ಶಿರಾದ ಔತಣ. ಹೀಗೆ ಮೊದಲ ದಿನ ಸಂಭ್ರಮದಿಂದ ಕಳೆದ ಮಕ್ಕಳು ನಲಿದಾಡುತ್ತ ಮನೆಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.