ADVERTISEMENT

ಕಾರಟಗಿ | ‘ಆಧುನಿಕತೆಯ ಭರಾಟೆಯಲ್ಲಿ ಸಂಸ್ಕೃತಿ ಮರೆಯಾಗದಿರಲಿ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 7:06 IST
Last Updated 16 ಡಿಸೆಂಬರ್ 2025, 7:06 IST
ಕಾರಟಗಿಯಲ್ಲಿ ಸೋಮವಾರ ನಡೆದ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿ ಮಾತನಾಡಿದರು ಸುಜ್ಞಾನೇಶ್ವರ ಭಾರತಿ ಸ್ವಾಮಿ ಮತ್ತಿತರ ಗಣ್ಯರು ಇದ್ದಾರೆ
ಕಾರಟಗಿಯಲ್ಲಿ ಸೋಮವಾರ ನಡೆದ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿ ಮಾತನಾಡಿದರು ಸುಜ್ಞಾನೇಶ್ವರ ಭಾರತಿ ಸ್ವಾಮಿ ಮತ್ತಿತರ ಗಣ್ಯರು ಇದ್ದಾರೆ   

ಕಾರಟಗಿ: ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಆಸ್ತಿ, ಅಂತಸ್ತು, ಹಣ ದ್ವಿಗುಣಗೊಂಡಿದೆ. ಆದರೆ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯಗಳು ಮರೆಯಾಗುತ್ತಿವೆ ಎಂದು ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳು ಹೇಳಿದರು.

ಪಟ್ಟಣದ ಜೆ.ಪಿ ನಗರದ ಶ್ರೀದೇವಿ ದೇವಸ್ಥಾನದ ಪುರಾಣ ಮಂಟಪದಲ್ಲಿ ದೈವಜ್ಞ ಸಮಾಜದವರು ಸೋಮವಾರ ಹಮ್ಮಿಕೊಂಡ ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಹಿಂದೆ ಬಡತನ, ಕಷ್ಟಗಳ ಮಧ್ಯೆ ಸಂಸ್ಕಾರದಿಂದ ವಿಮುಖರಾಗದೇ ಎಲ್ಲವನ್ನು ಸಮರ್ಪಕವಾಗಿ ಆಚರಿಸುತ್ತಿದ್ದರಿಂದ ಮನೆ, ಮನಗಳಲ್ಲಿ ನೆಮ್ಮದಿ, ಶಾಂತಿ, ಸಮೃದ್ದಿ ನೆಲೆಸಿರುತ್ತಿತ್ತು. ಪರಂಪರಾಗತವಾಗಿ ಆಚರಣೆಯಲ್ಲಿರುವ ಸಂಸ್ಕಾರ, ಸಂಸ್ಕೃತಿ ಮರೆಯದೇ ಮುನ್ನಡೆಯಿರಿ’ ಎಂದರು.

ADVERTISEMENT

‘ಹೆಸರಿನ ಕಾರಣಕ್ಕೆ ಮಾತ್ರ ಶ್ರೇಷ್ಠರಾಗದೇ ಕರ್ತವ್ಯ, ಆಚಾರ, ವಿಚಾರ ಹಾಗೂ ನಮ್ಮ ಮನಸ್ಥಿತಿಯಲ್ಲೂ ಶ್ರೇಷ್ಠರಾಗಬೇಕು. ಆಗ ಪರಮಾತ್ಮ ನಮ್ಮ ಆತ್ಮದಲ್ಲಿ ಸ್ಥಾಪಿತರಾಗುವರು’ ಎಂದರು.

ಕಿರಿಯ ಸ್ವಾಮೀಜಿ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಮಾತನಾಡಿದರು.

ರಂಗನಾಥ ವರ್ಣೇಕರ, ಸುಬ್ರಮಣ್ಯ ರಾಯ್ಕರ, ಪ್ರಭಾಕರ ರೇವಣಕರ, ಕರ್ಕಿ ಮಠದ ಟ್ರಷ್ಟಿ ಸುಬ್ರಹ್ಮಣ್ಯ ರಾಯ್ಕರ್‌, ಮುಖಂಡರಾದ ಪ್ರಭಾಕರ ರೇವಣಕರ, ರಂಗನಾಥ ವರ್ಣೇಕರ, ಮಂಜುನಾಥ ವರ್ಣೇಕರ್, ರೇಣುಕಾ ವಿ.ಕುರ್ಡೇಕರ, ಸತ್ಯನಾರಾಯಣ ಎಸ್. ವರ್ಣೇಕರ್, ಸುಬ್ರಾಯ ಕೆ. ರೇವಣಕರ, ನಾರಾಯಣ ಎನ್. ಕುರ್ಡೇಕರ, ದಿನೇಶ ಕೆ. ಶೇಠ್, ನಾರಾಯಣಪ್ಪ ಜಿ. ರೇವಣಕರ, ಪಾಂಡುರಂಗ ಕುರ್ಡೇಕರ, ಬಾಲಾಜಿ ಪಾಲನಕರ, ಗೋಪಾಲ ವರ್ಣೇಕರ ಜಿವಿಟಿ, ರಾಘವೇಂದ್ರ ಜಿ. ರೇವಣಕರ, ಅಶೋಕ ಕುರ್ಡೇಕರ, ಅನೀಲ್ ರಾಯ್ಕರ, ಶಿವಾನಂದ ರೇವಣಕರ, ನಾಗರಾಜ ಕಾಗಲ್ಕರ, ಪ್ರಶಾಂತ ಪ್ರಭಾಕರ ರೇವಣಕರ, ಅರುಣ ಎಲ್. ಪಾಲನಕರ, ವೆಂಕಟೇಶ ರಾಯ್ಕರ, ವಾದಿರಾಜ ಗೋಪಾಲಕೃಷ್ಣ ರೇವಣಕರ, ಆರ್. ಎನ್. ಕುರ್ಡೆಕರ, ನಾಗಾನಂದನ್ ಎನ್. ಕುರ್ಡೆಕರ, ಪ್ರವೀಣ ಪಿ. ಕುರ್ಡೆಕರ, ಉಲ್ಲಾಸ ಎಸ್. ಪಾಲನಕರ, ರಾಜು ದಿವಾಕರ, ಮೋಹನ ಆರ್. ರೇವಣಕರ, ಮಂಜುನಾಥ ರಾಯ್ಕರ, ಗಣೇಶ ಕುರ್ಡೆಕರ, ನಾಗರಾಜ ಪಿ. ರೇವಣಕರ  ಉಪಸ್ಥಿತರಿದ್ದರು.

ಸಾರೋಟದಲ್ಲಿ ಮೆರವಣಿಗೆ: ಶ್ರೀಗಳು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ದೈವಜ್ಞ ಸಮಾಜದವರು ಕರಿಯಪ್ಪ ತಾತ ದೇವಸ್ಥಾನದಿಂದ ಜೆಪಿ ನಗರದ ಶ್ರೀದೇವಿ ದೇವಸ್ಥಾನದವರೆಗೆ ಸಾರೋಟದಲ್ಲಿ ಸಕಲ ವಾದ್ಯ, ಮೇಳಗಳೊಂದಿಗೆ ಭವ್ಯ ಮೆರವಣಿಗೆ ನಡೆಸಿದರು. ಪೂರ್ಣಕುಂಭ, ಕಳಸದೊಂದಿಗೆ ಮೆರವಣಿಗೆ ನಡೆಯಿತು.

ಸಾರೋಟದಲ್ಲಿ ಶ್ರೀಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.