ADVERTISEMENT

ಅಪ್ಪನ ಕಾಮಕ್ಕೆ ತುತ್ತಾಗಿ ಮಗು ಹಡೆದ ಬಾಲಕಿ

ಅಪ್ಪಂದಿರ ದಿನದಂದೆ ಪತ್ತೆಯಾದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 12:37 IST
Last Updated 21 ಜೂನ್ 2020, 12:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೊಪ್ಪಳ: ತಂದೆಯಿಂದ ಸತತ ಒಂದು ವರ್ಷ ಕಾಲ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯೊಬ್ಬಳು, ಆತನ ಕ್ರೌರ್ಯದಿಂದ ಗರ್ಭಿಣಿಯಾಗಿ, ಮಗು ಹೆತ್ತಪ್ರಸಂಗ ಕೊಪ್ಪಳದಲ್ಲಿ ಭಾನುವಾರ ಪತ್ತೆಯಾಗಿದೆ.

ಕೊಪ್ಪಳ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿರುವ ಈ ಘಟನೆ, ವಿಶ್ವ ಅಪ್ಪಂದಿರ ದಿನದಂದೆ ಪತ್ತೆಯಾಗಿರುವುದು ವಿಪರ್ಯಾಸ.

ಪಾಪಿ ತಂದೆ 14 ವರ್ಷದ ಮಗಳನ್ನು ತನ್ನ ಜೊತೆಯಲ್ಲಿಯೇ ದನಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದ. ಸತತ ಒಂದು ವರ್ಷದಿಂದ ಮಗಳಿಗೆ ಬೆದರಿಕೆ ಹಾಕಿ ಲೈಂಗಿಕತೆಗೆ ಬಳಸಿಕೊಳ್ಳುತ್ತಾ ಇದ್ದನು ಎಂದು ತಿಳಿದು ಬಂದಿದೆ.

ADVERTISEMENT

ನಾಲ್ಕು ದಿನಗಳ ಹಿಂದೆ‌ ಆ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಗಂಗಾವತಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಗರ್ಭಿಣಿಯಾಗಿ 8 ತಿಂಗಳಾಗಿರುವುದು ಗೊತ್ತಾಗಿದ್ದು, ಹೆರಿಗೆಯನ್ನೂ ಸಹ ಅಲ್ಲಿಯೇ ಮಾಡಿಸಲಾಗಿದೆ. ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಈ ಕುರಿತು ತಾಯಿ ಮಗಳನ್ನು ವಿಚಾರಿಸಿದಾಗ ತಂದೆಯೆ ಈ ನೀಚ ಕೃತ್ಯದ ಬಗ್ಗೆ ಗೊತ್ತಾಗಿದೆ. ಇದರಿಂದ ನೊಂದ ತಾಯಿ ಪತಿ ಮೇಲೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತರ ಹೇಳಿಕೆ ಮತ್ತು ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ಅಧಿಕಾರಿಯ ದೂರು ಉಲ್ಲೇಖಿಸಿ ಪೊಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ತಂದೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.