ADVERTISEMENT

ಯಲಬುರ್ಗಾ: ಕಂಪ್ಯೂಟರ್ ಆಪರೇಟರಗಳ ದಿನಾಚರಣೆ

ಪಿಟಿಐ
Published 27 ಡಿಸೆಂಬರ್ 2025, 0:51 IST
Last Updated 27 ಡಿಸೆಂಬರ್ 2025, 0:51 IST
   

ಯಲಬುರ್ಗಾ: ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕಂಪ್ಯೂಟರ್ ಪಿತಾಮಹ ಚಾರ್ಲ್ಸ್‌ ಬ್ಯಾಬೇಜ್ ಅವರ 234ನೇ ಜನ್ಮ ದಿನಾಚರಣೆ ಪ್ರಯುಕ್ತ ಕಂಪ್ಯೂಟರ್ ಆಪರೇಟರ್ ಮತ್ತು ಡಾಟಾ ಎಂಟ್ರಿ ಆಪರೇಟರಗಳ ದಿನ ಆಚರಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹನಮಂತಗೌಡ ಪೊಲೀಸ್‍ಪಾಟೀಲ, ಫಕೀರಪ್ಪ ಕಟ್ಟಿಮನಿ, ಪಿಡಿಒ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೀರಭದ್ರಗೌಡ ಮೂಲಿಮನಿ, ವಿಷಯ ನಿರ್ವಾಹಕ ಬಸವರಾಜ ಹಳ್ಳಿ, ಪಿಡಿಒ ರೇಣುಕಾ ಟಂಕದ, ಅಬ್ದುಲ್ ಗಫಾರ್ ಮಾನತಾಡಿದರು.

ಕಂಪ್ಯೂಟರ್ ಅಪರೇಟರ್ ಮುರಾರಿರಾವ್ ಮಾತನಾಡಿ, ಡಾಟಾ ಎಂಟ್ರಿ ಆಪರೇಟರಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಬಗೆಹರಿಸುವುದು ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.

ADVERTISEMENT

ಕಂಪ್ಯೂಟರ್ ಆಪರೇಟರ್‌ ಅವರ ಕುಂದುಕೊರತೆಗಳ ನಿವಾರಣೆಗೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಪರೇಟರ್‌ಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.