
ಗಂಗಾವತಿ: ತಾಲ್ಲೂಕಿನ ಢಣಾಪುರ ಗ್ರಾಮವನ್ನ ಮದ್ಯ, ಮಟ್ಕಾ, ಇಸ್ಪೀಟ್ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರಿಂದ ಭಾನುವಾರ ಗ್ರಾಮದಲ್ಲಿ ಜಾಗೃತಿ ಜಾಥಾ, ಕಾರ್ಯಾಗಾರ ನಡೆಯಿತು.
ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದು ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮುಂದುವರಿದರೆ ಗ್ರಾಮೀಣ ಭಾಗದಲ್ಲಿ ಯುವ ಜನಾಂಗದ ಜೀವನ ಶೋಚನಿಯ ಸ್ಥಿತಿಗೆ ತಲುಪುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ಸಾಕಷ್ಟು ಜನ ಯುವಕರು ಮದ್ಯ, ಧೂಮಪಾನ, ಮಟ್ಕಾ, ಇಸ್ಪೀಟ್ ಜೂಜಾಟಗಳಿಗೂ ಯುವಕರು ಜೀವನ ಹಾಳು ಮಾಡಿಕೊಂಡಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ದುಶ್ಚಟ ಮುಕ್ತ ಢಣಾಪುರ ಮಾಡಲು ಈ ಜಾಥಾ ನಡೆಸಲಾಗುತ್ತಿದೆ ಎಂದರು.
ಗ್ರಾಮಸ್ಥ ಪಕೀರಪ್ಪ, ಮಲ್ಲನಗೌಡ , ಚಿದಾನಂದಪ್ಪ, ಅಯ್ಯ ಪ್ಪ, ವೀರೇಶಗೌಡ, ಲಿಂಗರಾಜ, ತಿಪ್ಪೇಸ್ವಾಮಿ, ನಾಗೇಶ, ಲಿಂಗಪ್ಪ, ಚಿನ್ನಮ್ಮ, ಜಮೀರ್, ಶರಣಪ್ಪ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.